ಶಿವಮೊಗ್ಗ: ಸಿ.ಟಿ ರವಿ ದತ್ತಪೀಠದಲ್ಲಿ ದತ್ತಮಾಲೆ ಹಾಕಿಕೊಂಡು ಭಿಕ್ಷೆ ಬೇಡಿ, ಹೆಣ್ಣು ಮಕ್ಕಳಿಗೆ ಗೌರವ ಕೊಡದೇ ಮಾತನಾಡಿದ್ದಾರೆ. ಹಿಂದುತ್ವ ಹೆಸರಿನಲ್ಲಿ ಇದೇ ಸಂಸ್ಕೃತಿಯನ್ನ ಸಿ.ಟಿ ರವಿ ಕಲಿತ್ತಿದ್ದ? ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು ಬಿಜೆಪಿಯವರು ಮಹಿಳೆಗೆ ಗೌರವ ಕೊಡುತ್ತೇವೆ ಅನ್ನುತ್ತಾರೆ. ಇದೇನಾ ಇವರು ಕೊಡುವ ಗೌರವ? ಎಂದು ಸಿ.ಟಿ.ರವಿ ಮೇಲೆ ವಾಗ್ದಾಳಿ ಮಾಡಿದ್ದಾರೆ.
ಈಶ್ವರಪ್ಪ ಪಕ್ಷ ಸೇರಲು ಇನ್ನಿಲ್ಲದ ಕಸರತ್ತು ಮಾಡ್ತಾ ಇದ್ದಾರೆ. ಹಾಗಾಗಿ ಬ್ರಿಗೇಡ್ ಚಾಲ್ತಿ ಮಾಡಿದ್ದಾರೆ ಅಷ್ಟೇ. ಸಚಿನ್ ಆತ್ಮಹತ್ಯೆ ಪ್ರಕರಣ ಸಂಬಂಧ ಮಾತನಾಡಿದ ಅವರು ಸಿಬಿಐಗೆ ಜಾಸ್ತಿ ಕೊಟ್ಟಿದ್ದು ನಾವೇನೇ. ಇದನ್ನು ಬೇಕಾದ್ರೆ ಸಿಬಿಐಗೆ ಕೊಡಬೇಕಾದರೆ ಕೋಡೋಣ ಬಿಡಿ. ಪ್ರಿಯಾಂಕ್ ಖರ್ಗೆಯವರ ಪಾತ್ರ ಏನಿದೆ? ಮುಡಾ ಹೋರಾಟ ಎಲ್ಲ ಮಾಡಿದ್ರಲ್ಲ ಏನ್ ಆಯ್ತು? ಬಿಜೆಪಿಯಲ್ಲೇ ಎರಡು ಭಾಗ ಆಗಿ ಬುಡ ಅಲ್ಲಾಡುತ್ತಿದೆ. ಬಾಣಂತಿಯರ ಸಾವನ್ನ ನಾವು ಸಮರ್ಥಿಸುವುದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿ ಗಮನ ಹರಿಸಬೇಕು. ಯಾರು ಸಹ ಸಾವನ್ನಪ್ಪಬಾರದು ನೋವಾಗುತ್ತೆ ಹೀಗಾದಾಗ ಎಂದರು.
PublicNext
06/01/2025 01:24 pm