ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೊಲೀಸರಿದ್ದಾರೆ ಎಚ್ಚರ, ಶಿವಮೊಗ್ಗಕ್ಕೆ ಬಂದ್ರು ವಿಭಿನ್ನ ಪೊಲೀಸರು

ಶಿವಮೊಗ್ಗ : ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಅಪಘಾತ ತಪ್ಪಿಸಲು ಶಿವಮೊಗ್ಗದಲ್ಲಿ ಪೊಲೀಸರು ವಿಭಿನ್ನ ಕಾರ್ಯಕ್ಕೆ ಮುಂದಾಗಿದ್ದಾರೆ. ಶಿವಮೊಗ್ಗ ನಗರದ ವಿವಿಧ ಕಡೆ ರಿಫ್ಲೆಕ್ಟಿವ್ ಸ್ವೀಕರ್ ಹೊಂದಿರುವ ಟ್ರಾಫಿಕ್ ಪೊಲೀಸ್ ಸ್ಟ್ಯಾಚುವನ್ನ ಪೊಲೀಸರು ಅಳವಡಿಸಿ ಅಪಘಾತ ಪ್ರಕರಣ ತಪ್ಪಿಸಲು ಮುಂದಾಗಿದ್ದಾರೆ.

ನಗರದ ಐದಾರು ವೃತ್ತದಲ್ಲಿ ಟ್ರಾಫಿಕ್ ಪೊಲೀಸ್ ಸ್ಟ್ಯಾಚುವನ್ನ ಅಳವಡಿಸಿ ವಾಹನ ಚಾಲಕರಿಗೆ ಜಾಗೃತಿ ಮೂಡಿಸಿದ್ದಾರೆ. ಶಿವಮೊಗ್ಗ ಪಶ್ವಿಮ ಸಂಚಾರ ಠಾಣೆಯ ಪೊಲೀಸರು ಅಪಘಾತ ಪ್ರಕರಣ ತಪ್ಪಿಸಲು ಹೊಸ ಪ್ಲಾನ್‌ ಮಾಡಿ ರಿಫ್ಲೆಕ್ಟಿವ್ ಸ್ವೀಕರ್ ಹಾಗೂ ಪೊಲೀಸ್‌ ಸ್ಟ್ಯಾಚು ತಯಾರಿಸಿದ್ದು ಇಂದು ಶಿವಮೊಗ್ಗ ಎಸ್ಪಿ ಮಿಥುನ್‌ ಕುಮಾರ್‌ ಟ್ರಾಫಿಕ್‌ ಪೊಲೀಸ್‌ ಸ್ಟ್ಯಾಚುವನ್ನ ಉದ್ಘಾಟಿಸಿದ್ದಾರೆ. ಮುಂದೆ ಪೊಲೀಸರಿದ್ದಾರೆ ಎಚ್ಚರಿಕೆ ಅನ್ನುವ ಸಂದೇಶ ಸಾರಿದ್ದು ವಾಹನ ಸವಾರರನ್ನ ಅಲರ್ಟ್‌ ಮಾಡಿದ್ದಾರೆ.

Edited By : Vinayak Patil
PublicNext

PublicNext

07/01/2025 05:29 pm

Cinque Terre

20.83 K

Cinque Terre

0

ಸಂಬಂಧಿತ ಸುದ್ದಿ