ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸನಗರ: ವಿದ್ಯುತ್ ಗುತ್ತಿಗೆದಾರನಿಂದ ಮೆಸ್ಕಾಂ ಇಲಾಖೆಗೆ ಮೋಸ - ತನಿಖೆಗಾಗಿ ಇಂಜಿನಿಯರ್‌ಗೆ ಮನವಿ

ಹೊಸನಗರ: ರಿಪನ್‌ಪೇಟೆ ಮೆಸ್ಕಾಂ ಇಲಾಖೆಯ ವಿದ್ಯುತ್ ಗುತ್ತಿಗೆದಾರ ನಾಗರಾಜ ಕೆ.ಹೆಚ್, ದುಂಡಾರ್ತನೆ ಹಾಗೂ ಇಲಾಖೆಗೆ ನಷ್ಟಪಡಿಸಿರುವುದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಚಿಕ್ಕಜೇನಿ ಗ್ರಾಮ ಪಂಚಾಯತಿಯ ಮಾಜಿ ಸದಸ್ಯ ಶಶಿಕುಮಾರ್‌ ಅವರು, ಹೊಸನಗರದ ಮೆಸ್ಕಾಂ ಇಲಾಖೆಗೆ ದೂರು ಸಲ್ಲಿಸಿ ತನಿಖೆಗೆ ಒತ್ತಾಯಿಸಿದ್ದಾರೆ.

ದೂರಿನಲ್ಲಿ ಚಿಕ್ಕಜೇನಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಕ್ಕಜೇನಿ ಗ್ರಾಮದ ಸರ್ವೆ ನಂ. 31 ರಲ್ಲಿ ಜನವರಿ 1ರಂದು ವಿದ್ಯುತ್ ಮಾರ್ಗದ ಮೇಲೆ ಒಣಗಿದ ಮರದ ರೆಂಬೆಯು ಗಾಳಿಗೆ ಮುರಿದು ಬಿದ್ದು 1 ಪಿಎಸ್‌ಇ ವಿದ್ಯುತ್ ಕಂಬ ಮುರಿದು ಹೋಗಿರುತ್ತದೆ. ಇದನ್ನು ನಾನು ಮೆಸ್ಕಾಂ ಇಲಾಖೆ ರಿಪ್ಪನ್‌ಪೇಟೆ ಸೆಕ್ಷನ್ ಸಹಾಯಕ ಇಂಜಿನಿಯರ್ ಆದ ಅಶ್ವಲ್‌ರ ಗಮನಕ್ಕೆ ತಂದಿರುತ್ತೇವೆ. ನಂತರ ಜನವರಿ 3 ರಂದು 2 ವಿದ್ಯುತ್ ಕಂಬಗಳನ್ನು ಕೆ.ಎ-15ಎ-6253 ಸಂಖ್ಯೆಯ ವಾಹನದಲ್ಲಿ ತೆಗೆದುಕೊಂಡು ವಿದ್ಯುತ್ ಕಂಬ ಮುರಿದ ಸ್ಥಳಕ್ಕೆ ಬಂದಿರುವುದನ್ನು ಗಮನಿಸಿ ಪುನಃ ಅಂದೇ ರಿಪ್ಪನ್‌ಪೇಟೆ ಸಹಾಯಕ ಇಂಜಿನಿಯರ್ ಗಮನಕ್ಕೆ ತಂದು, ನೀವು ಸ್ಥಳ ಮಹಜರು ಮಾಡಿದ್ದೀರಾ? ಎಂದು ಪ್ರಶ್ನಿಸಿ, ಅದಕ್ಕೆ ಸಂಬಂಧಿಸಿದಂತೆ ಯೋಜನಾ ವರದಿಯನ್ನು ಸಿದ್ಧಪಡಿಸಿದ್ದೀರಾ? ಎಂದು ನಾನು ಪ್ರಶ್ನಿಸಿದಾಗ, ಅದಕ್ಕೆಲ್ಲ ನಾವು ಘಟನೆ ನಡೆದ ಸ್ಥಳಕ್ಕೆ ಬರುವ ಅವಶ್ಯಕತೆ ಇಲ್ಲ, 2 ಕಂಬ ಮುರಿದ ಫೋಟೋ ಕಳಿಸಿರುತ್ತಾರೆ. ಅದನ್ನು ನೋಡಿ ನಾವು 2 ಕಂಬ ಕಳಿಸಿರುತ್ತೇವೆ ಎಂಬ ಹಾರಿಕೆ ಉತ್ತರವನ್ನು ನೀಡಿರುತ್ತಾರೆ. 1 ಕಂಬ ಮಾತ್ರ ಮುರಿದಿದೆ ಎಂದು ನಾವು ಹೇಳಿ ಮನವರಿಕೆ ಮಾಡಿದರೂ ಸಹ ಸಹಾಯಕ ಇಂಜಿನಿಯರ್ ಅವರು ಸ್ಪಂದಿಸದೆ ಗುತ್ತಿಗೆದಾರರ ಪರವಾಗಿ ನಿಂತಿರುತ್ತಾರೆ.

Edited By : Vijay Kumar
PublicNext

PublicNext

06/01/2025 07:59 pm

Cinque Terre

21.82 K

Cinque Terre

0

ಸಂಬಂಧಿತ ಸುದ್ದಿ