ಶಿವಮೊಗ್ಗ : ಕಳೆದ ಡಿಸೆಂಬರ್ ತಿಂಗಳಿನಲ್ಲಿ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಹಿರೇಜಂಬೂರು ಗ್ರಾಮದ ನಿವಾಸಿ ದೇವೇಂದ್ರಪ್ಪ ಎಂಬುವರ ಬೈಕನ್ನ ಶಿರಾಳಕೊಪ್ಪ ಪುರಸಭೆ ಆವರಣದಿಂದ ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಶಿಕಾರಿಪುರ ತಾಲೂಕಿನ ಹುಳವಳ್ಳಿ ಗ್ರಾಮದ ವೀರಭದ್ರಪ್ಪ ಎಂಬ ಆರೋಪಿಯನ್ನ ಬಂಧಿಸಿದ್ದಾರೆ. ಬಂಧಿತ ಆರೋಪಿಯ ಬಳಿ, ಶಿರಾಳಕೊಪ್ಪ ಪೊಲೀಸ್ ಠಾಣ ವ್ಯಾಪ್ತಿಯ 1 ಹಾಗೂ ಸಾಗರ ಟೌನ್ ಪೊಲೀಸ್ ಠಾಣೆಯ 1 ಪ್ರಕರಣ ಸೇರಿದಂತೆ ಒಟ್ಟು 2 ದ್ವಿಚಕ್ರ ವಾಹನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ 95,000 ರೂ. ಮೌಲ್ಯದ ಎರಡು ಬೈಕ್ ಗಳನ್ನು ಶಿರಾಳಕೊಪ್ಪ ಪೊಲೀಸರು ವಶಕ್ಕೆ ಪಡಿಸಿಕೊಂಡಿದ್ದಾರೆ.
Kshetra Samachara
05/01/2025 12:56 pm