ಶಿವಮೊಗ್ಗ : ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಹುಲಿ ದಾಳಿ ನಡೆಸಿದ್ದು ವ್ಯಕ್ತಿ ಸ್ವಲ್ಪದ್ರಲ್ಲೇ ಪಾರಾಗಿರುವ ಘಟನೆ ಕಳೆದ ರಾತ್ರಿ ಶಿವಮೊಗ್ಗ ತಾಲೂಕಿನ ಹುಂಬ್ಳೇಬೈಲು ಸಮೀಪದ ತೋಟದ ಕೆರೆ ಗ್ರಾಮದ ಬಳಿ ನಡೆದಿದೆ.
ಶಶಿಧರ್ ಎಂಬವರು ದಾವಣಗೆರೆಗೆ ಹೋಗಿ ವಾಪಸ್ಸು ಬರುವಾಗ ತೋಟದ ಕೆರೆ ಸಮೀಪ ಬೈಕ್‌ನಲ್ಲಿ ಹೋಗುತ್ತಿದ್ದ ಶಶಿಧರ್ ರವರಿಗೆ ಅಡ್ಡಲಾಗಿ ಹುಲಿಯೊಂದು ಬೈಕ್ ನ ಮೇಲೆ ಹಾರಿದ ಅನುಭವ ಆಗಿದೆ. ಮಿಂಚಿನಂತೆ ನಡೆದ ಘಟನೆಯಲ್ಲಿ ಬೈಕ್ ನಿಂದ ಶಶಿಧರ್ ಕೆಳಕ್ಕೆ ಬಿದ್ದಿದ್ದಾರೆ. ಇದೇ ವೇಳೆ ಅಲ್ಲಿಗೆ ಅಯ್ಯಪ್ಪಸ್ವಾಮಿ ಭಕ್ತರಿದ್ದ ಟಿಟಿಯೊಂದು ಬಂದಿದೆ, ಹೀಗಾಗಿ ಅದರ ಬೆಳಕಿಗೆ ವನ್ಯಜೀವಿ ಕಾಡಿನತ್ತ ಓಡಿದೆ ಎಂದು ಹೇಳಲಾಗಿದೆ.
Kshetra Samachara
05/01/2025 06:07 pm