ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೆಹಲಿಯ ಉದ್ಯಮಿ ಪುನೀತ್ ಸೂಸೈಡ್‌ ಕೇಸ್ : ಪತಿ-ಪತ್ನಿ ವಾಗ್ವಾದ, ಸಿಸಿಟಿವಿ ದೃಶ್ಯ ವೈರಲ್..!

ನವದೆಹಲಿ: ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಟೆಕ್ಕಿ ಅತುಲ್ ಸುಭಾಷ್ ಪತ್ನಿಯ ಕಿರುಕುಳಕ್ಕೆ ಬೇಸತ್ತು ಸಾವಿಗೆ ಶರಣಾಗಿದ್ದರು. ಸುದ್ದಿ ಬೆನ್ನಲ್ಲೆ ಮತ್ತೊಂದು ಇಂತಹದ್ದೇ ಆಘಾತಕಾರಿ ಘಟನೆ ವರದಿಯಾಗಿದೆ.

ದೆಹಲಿಯ ಉದ್ಯಮಿಯೊಬ್ಬರು ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದು, ಪೊಲೀಸರು ಇದೊಂದು ಆತ್ಮಹತ್ಯೆ ಎಂದು ಶಂಕಿಸಿದ್ದಾರೆ. ಖ್ಯಾತ ಕೆಫೆಯೊಂದರ ಸಹ ಸಂಸ್ಥಾಪಕ ಪುನೀತ್ ಖುರಾನಾ ಅವರೇ ಸಾವಿಗೆ ಶರಣಾದ ಉದ್ಯಮಿ.

ದೆಹಲಿಯ ಕಲ್ಯಾಣ್ ವಿಹಾರ್ ಪ್ರದೇಶದ ಮಾಡೆಲ್ ಟೌನ್‌ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ. ಖುರಾನಾ ಹಾಗೂ ಅವರ ಪತ್ನಿ ಮನಿಕಾ ಜಗದೀಶ್ ಪಹ್ವಾ ಅವರ ನಡುವೆ ದಾಂಪತ್ಯ ಕಲಹವಿತ್ತು. ಹೀಗಾಗಿ ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಪ್ರಕರಣ ನ್ಯಾಯಾಲಯದಲ್ಲಿತ್ತು.

ಇಬ್ಬರು ನಗರದಲ್ಲಿದ್ದ ತಮ್ಮ ವುಡ್‌ಬಾಕ್ಸ್ ಕೆಫೆಯ ಮಾಲೀಕತ್ವ ಹೊಂದಿದ್ದು, ವ್ಯವಹಾರದ ವಿಚಾರಕ್ಕೆ ಸಂಬಂಧಿಸಿದಂತೆಯೇ ಇಬ್ಬರ ಮಧ್ಯೆ ಮನಸ್ತಾಪ ಮೂಡಿತ್ತು. ಖುರಾನಾ ಕುಟುಂಬದ ಪ್ರಕಾರ ಆತನಿಗೆ ಪತ್ನಿ ಮೇಲೆ ಅಸಮಾಧಾನವಿತ್ತು. ಇವರಿಬ್ಬರು 2016ರಲ್ಲಿ ಮದುವೆಯಾಗಿದ್ದರು.

ಈ ಮಧ್ಯೆ ಸಿಸಿಟಿವಿ ದೃಶ್ಯವೊಂದು ಸೆರೆಯಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಅದರ ಪ್ರಕಾರ, ಪುನೀತ್ ಖುರಾನಾ ಹಾಗೂ ಪತ್ನಿ ಮನೀಕಾ ಜಗದೀಶ್ ಉದ್ಯಮದ ಆಸ್ತಿಗೆ ಸಂಬಂಧಿಸಿದಂತೆ ಕಿತ್ತಾಡಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Edited By : Abhishek Kamoji
PublicNext

PublicNext

05/01/2025 07:34 am

Cinque Terre

209.26 K

Cinque Terre

1

ಸಂಬಂಧಿತ ಸುದ್ದಿ