ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪತ್ನಿಯ ಮೇಲೆ ಅಸಭ್ಯವಾಗಿ ಕಾಮೆಂಟ್ ಮಾಡಿದ್ದಕ್ಕೆ ಸೀನಿಯರ್ ಮೇಲೆ ಶೂ ಎಸೆದ ಕಾನ್ಸ್‌ಟೇಬಲ್‌

ಭೋಪಾಲ್: ಪತ್ನಿಯ ಮೇಲೆ ಅಸಭ್ಯವಾಗಿ ಕಾಮೆಂಟ್ ಮಾಡಿದ್ದಕ್ಕೆ ಕಾನ್ಸ್‌ಟೇಬಲ್‌ವೋರ್ವ ಸೀನಿಯರ್ ಮೇಲೆ ಶೂ ಎಸೆದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನ ಪೊಲೀಸ್ ಠಾಣೆಯೊಂದರಲ್ಲಿ ನಡೆದಿದೆ.

ವರದಿಯ ಪ್ರಕಾರ, ಇಂದರ್‌ಗಂಜ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್‌ ಯೋಗೇಂದ್ರ ಜಾಟ್ ತನ್ನ ಕೆಳ ಸಿಬ್ಬಂದಿ (ಕಾನ್ಸ್‌ಟೇಬಲ್‌) ಪವನ್‌ ಸೆಂಗಾರ್ ಹೆಂಡತಿಯ ಬಗ್ಗೆ ಅಸಭ್ಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಆಕ್ಷೇಪಾರ್ಹ ಹೇಳಿಕೆಗಳಿಂದ ಕೋಪಗೊಂಡ ಪವನ್‌ ಸೆಂಗಾರ್ ತನ್ನ ಶೂ ತೆಗೆದು ಹೆಡ್ ಕಾನ್ಸ್‌ಟೇಬಲ್‌ ಯೋಗೇಂದ್ರ ಜಾಟ್ ಮೇಲೆ ಎಸೆದಿದ್ದಾನೆ.

ಫುಲ್ ಡೇ ಶಿಫ್ಟ್ ನಂತರ ಕಾನ್ಸ್‌ಟೇಬಲ್‌ ಪವನ್‌ ಸೆಂಗಾರ್ ರಜೆ ಕೇಳಿದ್ದರು. ಆದರೆ ಹೆಡ್ ಹೆಡ್ ಕಾನ್ಸ್‌ಟೇಬಲ್‌ ರಜೆ ನೀಡಲು ನಿರಾಕರಿಸಿ ರಾತ್ರಿ ಗಸ್ತು ತಿರುಗಲು ಹೋಗುವಂತೆ ತಿಳಿಸಿದ ಹಿನ್ನೆಲೆಯಲ್ಲಿ ಜಗಳ ಆರಂಭವಾಗಿದೆ ಎನ್ನಲಾಗಿದೆ. ನಂತರ ಇತರ ಪೊಲೀಸರು ಮಧ್ಯಪ್ರವೇಶಿಸಿ ಜಗಳವನ್ನು ತಡೆದು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದರೆ, ಈ ಪ್ರಕರಣದಲ್ಲಿ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.

Edited By : Vijay Kumar
PublicNext

PublicNext

06/01/2025 04:58 pm

Cinque Terre

52.25 K

Cinque Terre

0