ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಿಜಿಟಲ್ ಅರೆಸ್ಟ್‌ನಲ್ಲಿ 71 ಲಕ್ಷ ರೂ ಕಳೆದುಕೊಂಡ ಬಿಎಸ್‌ಎಫ್ ಇನ್ಸ್‌ಪೆಕ್ಟರ್

ಗ್ವಾಲಿಯರ್: ಮಧ್ಯಪ್ರದೇಶದ ಗ್ವಾಲಿಯರ್‌ನ ಟೆಕನ್‌ಪುರದಲ್ಲಿ ಬಿಎಸ್‌ಎಫ್ ಇನ್ಸ್‌ಪೆಕ್ಟರ್‌ಗೆ ಒಂದು ತಿಂಗಳ ಕಾಲ ನಡೆದ ‘ಡಿಜಿಟಲ್ ಅರೆಸ್ಟ್‌’ನಲ್ಲಿ 71 ಲಕ್ಷ ರೂಪಾಯಿ ವಂಚಿಸಲಾಗಿದೆ.

ಡಿಜಿಟಲ್ ಅರೆಸ್ಟ್‌ನಿಂದ ಪಾರಾಗಲು ಇನ್ಸ್‌ಪೆಕ್ಟರ್ ನವದೆಹಲಿಯಲ್ಲಿರುವ ತನ್ನ ಆಸ್ತಿಯನ್ನು ಮಾರಾಟ ಮಾಡಿದರು ಹಾಗೂ ಎಲ್ಲ ಹಣ ಕೂಡ ಕಳೆದುಕೊಂಡರು. ತಂದೆಯ ತೊಳಲಾಟವನ್ನು ಗಮನಿಸಿ ಮಗ ಪ್ರಶ್ನಿಸಿದಾಗ ಡಿಜಿಟಲ್ ಅರೆಸ್ಟ್‌ ವಿಚಾರ ಹೊರಬಿದ್ದಿದೆ. ಬಳಿಕ ಗ್ವಾಲಿಯರ್ ಸೈಬರ್ ಕ್ರೈಂ ಬ್ರಾಂಚ್‌ಗೆ ವಿಷಯ ತಿಳಿಸಿದ್ದು, ಅಪರಿಚಿತ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮಾಹಿತಿಯ ಪ್ರಕಾರ, ಹಣ ಕಳೆದುಕೊಂಡವರನ್ನು ಅವಸರ್ ಅಹ್ಮದ್ ಎಂದು ಗುರುತಿಸಲಾಗಿದ್ದು, ಗ್ವಾಲಿಯರ್‌ನ ಟೆಕನ್‌ಪುರ ಪ್ರದೇಶದಲ್ಲಿ ಬಿಎಸ್‌ಎಫ್‌ನಲ್ಲಿ ಇನ್ಸ್‌ಪೆಕ್ಟರ್ ಆಗಿ ನೇಮಕಗೊಂಡಿದ್ದಾರೆ.

ಒಂದು ತಿಂಗಳ ಹಿಂದೆ, ತಮಗೆ ಫೋನ್ ಕರೆ ಬಂದಿತ್ತು. ಅಲ್ಲಿ ಕರೆ ಮಾಡಿದವರು ಹಣ ಲಾಂಡರಿಂಗ್‌ನಲ್ಲಿ ನೀವು ಭಾಗಿಯಾಗಿದ್ದೀರಿ ಎಂದು ಬೆದರಿಕೆ ಹಾಕಿದ್ದರು. ವಂಚಕರು, ಪೊಲೀಸ್ ಅಧಿಕಾರಿಗಳಂತೆ ಮಾರುವೇಷದಲ್ಲಿ ವಾಟ್ಸಾಪ್ ವಿಡಿಯೋ ಕಾಲ್ ಮೂಲಕ ಬೆದರಿಸಿ, ನನ್ನ ಫೋನ್ ಮೇಲೆ ನಿಗಾ ಇಟ್ಟಿರುವುದಾಗಿ ಎಚ್ಚರಿಸಿದ್ದರು. ಅಷ್ಟೇ ಅಲ್ಲದೆ ಈ ಬಗ್ಗೆ ಯಾರಿಗೂ ಮಾಹಿತಿ ನೀಡದಂತೆ ವಾರ್ನಿಂಗ್ ಕೂಡ ಕೊಟ್ಟಿದ್ದರು. ಒಂದು ವೇಳೆ ಇದನ್ನು ಯಾರಿಗಾದರು ಹೇಳಿದ್ರೆ ಕುಟುಂಬ ಸದಸ್ಯರನ್ನು ಬಂಧಿಸುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದರು ಎಂದು ಹಣ ಕಳೆದುಕೊಂಡ ಅವಸರ್ ಅಹ್ಮದ್ ದೂರಿನಲ್ಲಿ ತಿಳಿಸಿದ್ದಾರೆ.

ಭಯದಲ್ಲಿ ಮುಳುಗಿದ ಅಹ್ಮದ್ ವಂಚಕರ ಬೇಡಿಕೆಗಳನ್ನು ಪೂರೈಸಿದನು. ಅವರು ದೆಹಲಿಯಲ್ಲಿ ಒಂದು ಫ್ಲಾಟ್ ಅನ್ನು ಮಾರಾಟ ಮಾಡಿದರು. ಅವರ ಉಳಿತಾಯವನ್ನು ದಿವಾಳಿ ಮಾಡಿದರು ಮತ್ತು ಹಣವನ್ನು ಹೊಂದಿಸಲು ಭೂಮಿಯನ್ನು ಸಹ ಮಾರಾಟ ಮಾಡಿದರು. 34 ವಹಿವಾಟುಗಳಲ್ಲಿ ಒಟ್ಟು 71 ಲಕ್ಷ ರೂಪಾಯಿಯನ್ನು ವಂಚಕರಿಗೆ ವರ್ಗಾಯಿಸಿದ್ದಾರೆ.

Edited By : Vijay Kumar
PublicNext

PublicNext

07/01/2025 03:04 pm

Cinque Terre

26.57 K

Cinque Terre

0

ಸಂಬಂಧಿತ ಸುದ್ದಿ