ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

8 ಜನ ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ

ಬೆಂಗಳೂರು: ರಾಜ್ಯದ ವಿವಿಧೆಡೆ 8 ಜನ ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರ ತಂಡ ದಾಳಿ ನಡೆಸಿದೆ. ಅಸಮತೋಲಿತ ಆಸ್ತಿ ಸಂಗ್ರಹದ ಆರೋಪದಡಿ ಬೆಂಗಳೂರು, ಚಿಕ್ಕಮಗಳೂರು, ಬೀದರ್, ಬೆಳಗಾವಿ, ತುಮಕೂರು, ಗದಗ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಲೋಕಾಯುಕ್ತ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಲೋಕಾಯುಕ್ತ ದಾಳಿಗೊಳಗಾದ ಅಧಿಕಾರಿಗಳ ವಿವರ

ಶೋಭಾ - ಜಂಟಿ ಆಯುಕ್ತೆ, ಸಾರಿಗೆ ಇಲಾಖೆ, ಬೆಂಗಳೂರು

ಡಾ.ಎಸ್.ಎನ್ ಉಮೇಶ್ - ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ - ಕಡೂರು ತಾಲ್ಲೂಕು, ಚಿಕ್ಕಮಗಳೂರು

ರವೀಂದ್ರ - ಇನ್ಸ್‌ಪೆಕ್ಟರ್, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪವಿಭಾಗ, ಬಸವ ಕಲ್ಯಾಣ, ಬೀದರ್

ಪ್ರಕಾಶ್ ಶ್ರೀಧರ್ ಗಾಯಕ್ವಾಡ್ - ತಹಶಿಲ್ದಾರ್, ಖಾನಾಪುರ, ಬೆಳಗಾವಿ

ಎಸ್.ರಾಜು - ಪ್ರಾದೇಶಿಕ ಸಾರಿಗೆ ಅಧಿಕಾರಿ (ನಿವೃತ್ತ), ಪ್ರಾದೇಶಿಕ ಸಾರಿಗೆ ಇಲಾಖೆ, ತುಮಕೂರು

ಹುಚ್ಚೇಶ್ - ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಇನ್ ಚಾರ್ಜ್), ಗದಗ - ಬೆಟಗೇರಿ ಪುರಸಭೆ, ಗದಗ

ಆರ್.ಎಚ್.ಲೋಕೇಶ್ - ಕಲ್ಯಾಣಾಧಿಕಾರಿ, ಹಿಂದುಳಿದ ವರ್ಗಗಳ ಇಲಾಖೆ, ಬಳ್ಳಾರಿ

ಹುಲಿರಾಜ - ಕಿರಿಯ ಇಂಜಿನಿಯರ್, ಗಿಲ್ಲೇಸುಗೂರು ಘಟಕ, ರಾಯಚೂರು

Edited By : Nagaraj Tulugeri
PublicNext

PublicNext

08/01/2025 09:52 am

Cinque Terre

103.85 K

Cinque Terre

0

ಸಂಬಂಧಿತ ಸುದ್ದಿ