ನವದೆಹಲಿ: ಜಾಗತಿಕ ಜನಸಂಖ್ಯೆಯ ಕುಸಿತದ ಬಗ್ಗೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ, ಉದ್ಯಮಿ ಎಲೋನ್ ಮಸ್ಕ್ ಮತ್ತೆ ಕಳವಳ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಟೆಸ್ಲಾ ಮಾಲೀಕರ ಸಿಲಿಕಾನ್ ವ್ಯಾಲಿ ಹೆಸರಿನ ಬಳಕೆದಾರರು, ವಿವಿಧ ವರ್ಷಗಳಲ್ಲಿ ಜನಸಂಖ್ಯಾ ದರ ಹೇಗೆ ಕುಸಿತವಾಗಿದೆ ಎಂಬುದರ ಬಗ್ಗೆ ಗ್ರಾಫ್‌ವೊಂದನ್ನು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಹೌದು ಎಂದು ಪ್ರತಿಕ್ರಿಯೆ ನೀಡುವ ಮೂಲಕ ಎಲೋನ್ ಮಸ್ಕ್ ಕಳವಳ ವ್ಯಕ್ತಪಡಿಸಿದ್ದಾರೆ.
ಭಾರತ, ಚೀನಾ, ನೈಜೀರಿಯಾ, ಯುನೈಟೆಡ್ ಸ್ಟೇಟ್ಸ್, ಇಂಡೋನೇಷ್ಯಾ ಮತ್ತು ಪಾಕಿಸ್ತಾನ ಸೇರಿದಂತೆ ಪ್ರಮುಖ ರಾಷ್ಟ್ರಗಳು 2018 - 2100ರ ನಡುವೆ ಜನಸಂಖ್ಯೆ ದರ ಕುಸಿತವನ್ನು ಗ್ರಾಫ್ ಸೂಚಿಸಿದೆ.
ಮಸ್ಕ್ ವಿಶ್ವದ ಜನಸಂಖ್ಯೆ ಕುಸಿಯುತ್ತಿರುವ ಬಗ್ಗೆ ಮಾತನಾಡಿದ್ದು ಇದೇ ಮೊದಲೇನಲ್ಲ. ದಾಖಲೆಯ ಕಡಿಮೆ ಜನನ ಪ್ರಮಾಣವು ಕೆಲ ದೇಶಗಳಲ್ಲಿ ಜನಸಂಖ್ಯೆಯ ಕುಸಿತಕ್ಕೆ ಕಾರಣವಾಗುತ್ತಿದೆ ಎಂದು ಎಚ್ಚರಿಸಿದ್ದರು.
PublicNext
08/01/2025 05:37 pm