ವಾಷಿಂಗ್ಟನ್ : ಕೆನಡಾ ದೇಶ ಅಮೆರಿಕದೊಂದಿಗೆ ವಿಲೀನಗೊಂಡು, 51ನೇ ರಾಜ್ಯವಾಗಿ ಗುರುತಿಸಲ್ಪಡಬೇಕು ಎನ್ನುವ ಮಹತ್ವಾಕಾಂಕ್ಷೆ ಹೊಂದಿದ್ದ ಚುನಾಯಿತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸದ್ಯ ಕೆನಡಾವನ್ನು ಯುನೈಟೆಡ್ ಸ್ಟೇಟ್ಸ್ ನ ಭಾಗವೆಂದು ತೋರಿಸುವ ನಕ್ಷೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಹೌದು, ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬರಲು ಇನ್ನೂ 12 ದಿನಗಳು ಬಾಕಿ ಉಳಿದಿವೆ. ಈ ಮೂಲಕ ಜನವರಿ 20 ರಂದು ಡೊನಾಲ್ಡ್ ಟ್ರಂಪ್ ಅಧಿಕೃತವಾಗಿ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡುತ್ತಾರೆ. ಆದರೆ ಅಧಿಕಾರಕ್ಕೆ ಏರುವ ಮೊದಲೇ ಅಮೆರಿಕದ ಪಕ್ಕದಲ್ಲೇ ಇರುವ ಅಮೆರಿಕದ ಆಪ್ತ ಮಿತ್ರ ಕೆನಡಾ ನೆಲವನ್ನೇ ಕಬ್ಜಾ ಮಾಡಲು ಟ್ರಂಪ್ ಸ್ಕೆಚ್ ಹಾಕಿದ್ದಾರಾ? ಎನ್ನುವ ವಿಚಾರ ಹುಟ್ಟುವಂತೆ ಮಾಡಿದ್ದಾರೆ.
ಕೆನಡಾ ದೇಶವನ್ನೇ ತಮ್ಮ ತೆಕ್ಕೆಗೆ ತೆಗೆದುಕೊಂಡು ಅಮೆರಿಕ ಜೊತೆ ವಿಲೀನ ಮಾಡಿಕೊಳ್ಳುವ ರೀತಿಯ ಮ್ಯಾಪ್ ನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಸಂಚಲನ ಸೃಷ್ಟಿಸಿದ್ದಾರೆ.
ಇನ್ನೂ ಉಭಯ ದೇಶಗಳನ್ನು ವಿಲೀನಗೊಳಿಸುವ ಯಾವುದೇ ಸಾಧ್ಯತೆ ಇಲ್ಲ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಬುಧವಾರ ಹೇಳಿದ್ದಾರೆ.
PublicNext
08/01/2025 04:54 pm