ಸಾಗರ: ತಾಲೂಕಿನ ಬಾರಂಗಿ ಹೋಬಳಿ ಕಾರ್ಗಲ್ ಗ್ರಾಮ ಸರ್ವೆ ನಂಬರ್ ಒಂದರಲ್ಲಿ ಅರಣ್ಯ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಅರಣ್ಯ ಇಲಾಖೆ ವತಿಯಿಂದ ಶುಕ್ರವಾರ ಸುಮಾರು 350 ರಿಂದ 400 ಅಡಿಕೆ ಮರಗಳನ್ನು ಕಡಿದು ನೆಲಸಮ ಮಾಡಲಾಗಿದೆ.
ರೈತ ಮಂಜುನಾಥ್(ಟ್ರ್ಯಾಕ್ಟರ್ ಮಂಜಣ್ಣ) ಎಂಬುವರ ಜಮೀನಿನಲ್ಲಿ ಸುಮಾರು ಐದು ವರ್ಷಗಳ ಪಸುಲು ಬಿಟ್ಟಂತಹ ಸುಮಾರು 350 ರಿಂದ 400 ಅಡಿಕೆ ಮರಗಳನ್ನು ಕಡಿದು ನೆಲಸಮ ಮಾಡಿ ಜೆಸಿಬಿ ಯಂತ್ರದ ಮುಖಾಂತರ ನಾಶಪಡಿಸಿರುತ್ತಾರೆ .
ಅರಣ್ಯ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆಧಾರದ ಮೇಲೆ ಕೇಸು ದಾಖಲಿಸಿ ಭೂ ಅತಿಕ್ರಮಣ ನ್ಯಾಯಾಲಯದಲ್ಲಿ ಒಂದು ಎಕರೆ 20 ಗುಂಟೆ, ಬಿಟ್ಟು ಉಳಿದ ಸ್ಥಳಗಳನ್ನು ತೆರವುಗೊಳಿಸಿ ಅರಣ್ಯ ಇಲಾಖೆ ವಶಪಡಿಸಿಕೊಳ್ಳಬೇಕೆಂದು ಆದೇಶ ಆಗಿರುವ ಆಧಾರದ ಮೇಲೆ ಈ ಕ್ರಮ ಜರುಗಿಸಲಾಗಿದೆ
ಅತಿಕ್ರಮಿಸಿಕೊಂಡಂತಹ ಸ್ಥಳವನ್ನು ವಶಪಡಿಸಿಕೊಳ್ಳಲಿ ಆದರೆ ಫಲ ಬಿಡುತ್ತಿದ್ದಂತ ಯಾವುದೇ ಮರಗಳನ್ನು ಕಡೆಯಬಾರದೆಂದು ಮಾನ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ತಿಳಿಸಿರುವ ವಿಡಿಯೋ ಅತಿ ಹೆಚ್ಚು ವೈರಲ್ ಆಗಿರುತ್ತದೆ ಹೀಗಿದ್ದರೂ ಬೆಳೆದ ಮರಗಳನ್ನು ಕಡೆದು ಜಿಸಿಬಿ ಮುಖಾಂತರ ಪುಡಿ ಮಾಡಿರುವುದು ಎಷ್ಟು ಸರಿ,ಜೋಗ ಕಾರ್ಗಲ್ ಜನತೆಗೆ ಹಾಗೂ ಅರಣ್ಯ ವಾಸಿಗಳು ದಯಮಾಡಿ ಪ್ರತಿಯೊಬ್ಬರೂ ಎಚ್ಚರಗೊಳ್ಳಬೇಕೆಂದು ವ್ಯಕ್ತಿ ಒಬ್ಬರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡಿದ್ದಾರೆ.
Kshetra Samachara
03/01/2025 07:38 pm