ಶಿವಮೊಗ್ಗ : ಗೋವುಗಳು ಬಾರದ ಹಿನ್ನೆಲೆ ಹೊಸ ಗೋ ಶಾಲೆ ಆರಂಭಿಸುವುದಿಲ್ಲ ಎಂದು ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಈ ನಿರ್ಧಾರ ಕೂಡಲೇ ಹಿಂಪಡೆಯಬೇಕು, ಹಿಂದಿನ ಸರ್ಕಾರ ಜಿಲ್ಲೆಗೊಂದು ಗೋ ಶಾಲೆ ಸ್ಥಾಪಿಸಬೇಕು ಎಂದು ಹೇಳಿತ್ತು, ಆದರೆ ಈ ಸರ್ಕಾರ ಹೊಸ ಗೋ ಶಾಲೆ ಪ್ರಾರಂಭಿಸುವುದಿಲ್ಲ ಎಂದು ಹೇಳಿ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡ್ತಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿವಮೊಗ್ಗ ನಗದಲ್ಲಿ ಮಾತನಾಡಿದ ಅವರು ಮದರಸ, ಉರ್ದು ಶಾಲೆಗಳಲ್ಲಿ ಮಕ್ಕಳಿಲ್ಲ ಎಂಬ ಕಾರಣಕ್ಕೆ ಅವುಗಳನ್ನು ಮುಚ್ಚುತ್ತೀರಾ, ಮೃತ್ಯುಂಜಯ ನದಿಗೆ ಗೋ ಮಾಂಸದ ತ್ಯಾಜ್ಯ ಹಾಕಲಾಗಿತ್ತು. ಈ ನೀರು ನೇತ್ರಾವತಿ ನದಿಗೆ ಸೇರಲಿದೆ. ಧರ್ಮಸ್ಥಳದಲ್ಲಿ ಪುಣ್ಯ ಸ್ನಾನವನ್ನು ಅಪವಿತ್ರಗೊಳಿಸುವ ಪ್ರಯತ್ನ ಇದು. ಗೋ ಹತ್ಯೆ ನಿಷೇಧವಿದ್ದರು ಇಷ್ಟೊಂದು ಗೋ ಮಾಂಸ ತ್ಯಾಜ್ಯ ಬಂದಿದ್ದು ಹೇಗೆ, ಹಿಂದು ಸಮಾಜಕ್ಕೆ ಮತ್ತು ನಂಬಿಕೆಗೆ ತೊಂದರೆ ಉಂಟು ಮಾಡುವವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳದಿರೋದೇಕೆ ಯಾಕೆ ಪ್ರಶ್ನೆ ಮಾಡಿದರು. ಬಸ್ ಪ್ರಯಾಣ ದರ ಶೇ.15ರಷ್ಟು ಹೆಚ್ಚಳ ಮಾಡಲಾಗಿದೆ.
ಇದು ಸಾಲ ಮಾಡಿ ಹಬ್ಬದೂಟ ಮಾಡಿದಂತಾಗಿದೆ, ಸಾಲ ಮಾಡಿ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದರಿಂದ ಎಲ್ಲದರ ದರ ಹೆಚ್ಚಳ ಮಾಡುತ್ತಿದ್ದಾರೆ. ಇನ್ನು ಹಲವು ಬೆಲೆ ಏರಿಕೆಗಳು ಬಾಕಿ ಇದೆ, ವಿನಾಕಾರಣ ತಮ್ಮ ಮೇಲೆ ಆರೋಪ ಬಂದಾಗ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ತನಿಖೆ ಬಳಿಕ ನಿರ್ದೋಷಿ ಎಂಬ ತೀರ್ಪು ಬಂತು.
ಸಂತೋಷ್ ಆತ್ಮಹತ್ಯೆ ಪ್ರಕರಣ ಸಂದರ್ಭ ತಮಗೆ ತೊಂದರೆ ಕೊಟ್ಟವರೆಲ್ಲ ಈಗಲು ಅನುಭವಿಸುತ್ತಿದ್ದಾರೆ. ಇನ್ಮುಂದೆಯು ಅನುಭವಿಸುತ್ತಾರೆ. ರಾಜಕಾರಣದಲ್ಲಿ ಮುಗಿಸಲು ಪ್ರಯತ್ನಿಸಿದ್ದರು. ಪ್ರಿಯಾಂಕ್ ಖರ್ಗೆ ವಿಚಾರದಲ್ಲಿ ಯಾರು ತಪ್ಪಿತಸ್ಥರಿದ್ದಾರೋ ಅವರ ಬಗ್ಗೆ ಭಗವಂತ ನೋಡಿಕೊಳ್ಳುತ್ತಾನೆ. ಸುಖಾಸುಮ್ಮನೆ ಆರೋಪ ಮಾಡಿದರೆ ಅನುಭವಿಸುತ್ತಾರೆ ಎಂದರು.
PublicNext
03/01/2025 04:21 pm