ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಕಾರಿಪುರ :ಬಳಿಗಾರ್ ನಾನು ಶಾಸಕನಾಗಲು ಪ್ರಮುಖ ಪಾತ್ರ ವಹಿಸಿದರು - ಬಿ.ವೈ.ವಿಜಯೇಂದ್ರ

ಶಿಕಾರಿಪುರ : ನಾನು ಶಿಕಾರಿಪುರದ ಶಾಸಕನಾಗಿ ವಿಧಾನಸಭೆ ಪ್ರವೇಶಿಸಲು ಹೆಚ್.ಟಿ.ಬಳಿಗಾರರವರು ಪ್ರಮುಖ ಪಾತ್ರ ವಹಿಸಿದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಶಿಕಾರಿಪುರ ಪಟ್ಟಣದ ಹೆಚ್.ಟಿ.ಬಳಿಗಾರ್ ಅಭಿಮಾನಿ ಬಳಗದಿಂದ ಮಂಗಳ ಭವನದಲ್ಲಿ ನಡೆದ ಶ್ರದ್ಧಾಂಜಲಿ ಸಭೆ ಹಾಗೂ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅರವು ಎಲ್ಲ ಸಮಾಜಗಳ ಜೊತೆ ಸಾಮರಸ್ಯದ ಒಡನಾಟವನ್ನು ಹೊಂದಿದ್ದ ಬಳಿಗಾರರವರು ಮಾನವೀಯ ಮೌಲ್ಯಗಳಿಗೆ ಬೆಲೆ ಕೊಡುವವರಾಗಿದ್ದರು, ಕೆ.ಎ.ಎಸ್ ಹಿರಿಯ ಅಧಿಕಾರಿ ಆಗಿ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾಗಿ, ಜಿಲ್ಲಾ ವಾಲ್ಮೀಕಿ ಸಮಾಜದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಅವರು ಯಾವತ್ತೂ ಕೂಡ ತಮ್ಮ ಸೇವಾ ಅವಧಿಯಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಕರ್ತವ್ಯ ನಿರ್ವಹಿಸಿದ್ದಾರೆ ಎಂದರು.

ರಾಜಕೀಯದಲ್ಲಿ ಅವರಂತಹ ಮೌಲ್ಯಗಳ ವ್ಯಕ್ತಿ ಬರಬೇಕೆಂದು ನಾನು ಅವರನ್ನು ರಾಯಚೂರಿನ ಯಾವದಾದರೊಂದು ಕ್ಷೇತ್ರದಿಂದ ನಿಲ್ಲಿಸಿ ವಿಧಾನಸಭೆಗೆ ಆರಿಸಬೇಕು ಎಂದು ನಾನು ನಮ್ಮ ತಂದೆಯವರು ಮಾತನಾಡಿದ್ದೆವು. ಅಂಥವರು ವಿಧಾನಸಭೆಯಲ್ಲಿ ಇರಬೇಕು ಎಂದು ಆಶಿಸಿ ಅವರೊಂದಿಗೆ ಚರ್ಚಿಸಿದ್ದೆ, ಆದರೆ ಅವರು ನಿರಾಕರಿಸಿ ದೊಡ್ಡವರಾದರು ಎಂದರು.

Edited By : PublicNext Desk
Kshetra Samachara

Kshetra Samachara

05/01/2025 07:28 pm

Cinque Terre

1.68 K

Cinque Terre

0

ಸಂಬಂಧಿತ ಸುದ್ದಿ