ಶಿವಮೊಗ್ಗ : ಸಂಕ್ರಾಂತಿ ಆದಮೇಲೆ ದೇಶದ ಪ್ರಧಾನಿ ಚೇಂಜ್ ಆಗ್ತಾರೆ ಅಂತಾ ನಾವು ಹೇಳ್ತೀವಿ, ನಮ್ಗೆ ಬೇಕಾದವರು ಪ್ರಧಾನಿ ಆಗಬೇಕು ಎಂಬ ಆಸೆ ನಮಗೂ ಇದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು ಸಂಪುಟ ಬದಲಾವಣೆ ಬಗ್ಗೆ ಈಗ ಯಾವುದೇ ಚರ್ಚೆ ಆಗಿಲ್ಲ, ಸಿಎಂ ಬದಲಾವಣೆ ಬಗ್ಗೆಯೂ ಯಾವುದೇ ಚರ್ಚೆ ಆಗಿಲ್ಲ, ಬಿಜೆಪಿ ಅವರ ಪ್ರಕಾರ ಸಿಎಂ ಬದಲಾವಣೆ ಆಗ್ತಾರೆ ಅಂದ್ರೆ ನಾನು ಹೇಳ್ತೀನಿ ಸಂಕ್ರಾಂತಿ ಆದಮೇಲೆ ಪ್ರಧಾನಿ ಮಂತ್ರಿಯೂ ಬದಲಾಗುತ್ತಾರೆ ಅಂತಾ ಎಂದು ಲೇವಡಿ ಮಾಡಿದರು.
ಇನ್ನು ಸಚಿವ ಸಂಪುಟ ವಿಸ್ತರಣೆ ಬಗ್ಗೆ ಹೈ ಕಮಾಂಡ್ ತೀರ್ಮಾನ ಮಾಡ್ತಾರೆ, ಈ ಬಗ್ಗೆ ರಾಜ್ಯದ ಸಿಎಂ, ಡಿಸಿಎಂ ತೀರ್ಮಾನ ಮಾಡ್ತಾರೆ, ನಾನು ಕೂಡ ಒಬ್ಬ ಅಸಹಾಯಕ, ನಾನು ಹೈಕಮಾಂಡ್ ಹೇಳಿದಂಗೆ ಕೇಳ್ತೇನೆ ಅಷ್ಟೇ ಎಂದರು.
PublicNext
06/01/2025 05:10 pm