ಶಿವಮೊಗ್ಗ : ಬಳಿಗಾರ್ ರವರು ಪಕ್ಷ ಜಾತಿ ಮತವನ್ನು ಮೀರಿ ನಿಂತ ವ್ಯಕ್ತಿ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಶಿಕಾರಿಪುರ ಪಟ್ಟಣದಲ್ಲಿ ಹೆಚ್.ಡಿ.ಬಳಿಗಾರ್ ರವರ ನುಡಿ ನಮನ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದ ಅವರು ಬಳಿಗಾರ್ ಅವರ ನಿಧನದಿಂದ ಒಬ್ಬ ಆತ್ಮೀಯರನ್ನು ಕಳೆದುಕೊಂಡಂತಾಗಿದೆ, ಅವರು ನಿಧನರಾದಾಗ ನಾನು ಪ್ಯಾರಿಸ್ ನಲ್ಲಿದ್ದೆ, ಅಂತ್ಯ ಸಂಸ್ಕಾರಕ್ಕೆ ಬರಲು ಆಗಲಿಲ್ಲ. ಆದರೆ ಅವರಿಗೆ ಶ್ರದ್ದಾಂಜಲಿ ಅರ್ಪಿಸುವ ಅವಕಾಶ ದೊರೆತಿದೆ. ಯಾವದೇ ಪಕ್ಷ ಜಾತಿ ಮತವನ್ನು ಮೀರಿನಿಂತವ್ಯಕ್ತಿತ್ವ ಅವರದು , ಅವರ ಅಭಿಮಾನಿಗಳ ಬಳಗ ದೊಡ್ಡದಿದೆ. ಅವರಿಗೆ ಕೇಂದ್ರದ ಆಹಾರ ನಿಗಮದಲ್ಲಿ ನಿರ್ದೇಶಕರನ್ನಾಗಿ ಮಾಡುವ ಸಿದ್ದತೆಯಾಗಿತ್ತು, ಆದರೆ ದೇವರು ಅದಕ್ಕೆ ಅವಕಾಶ ಕೊಡಲಿಲ್ಲ ಎಂದು ವಿಷಾದಿಸಿದರು.
Kshetra Samachara
05/01/2025 07:33 pm