ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ : ನಿಲ್ಲದ ಕಾಡಾನೆ ಹಾವಳಿ, ಬೆಳೆ ನಾಶ

ಶಿವಮೊಗ್ಗ : ಸಾಗರ ತಾಲೂಕಿನ ಗೀಳಲಗುಂಡಿ ಗ್ರಾಮದ ಪತ್ರೆಹೊಂಡದ ಬಳಿ ಕಾಡಾನೆ ದಾಳಿಯಿಂದ ತೋಟದ ಬೆಳೆ ನಾಶವಾಗಿರುವ ಘಟನೆ ನಡೆದಿದೆ.

ಆನಂದಪುರ ಸಮೀಪದ ಗೀಳಲಗುಂಡಿ ಗ್ರಾಮದ ಪತ್ರೆ ಹೊಂಡದಲ್ಲಿ ಕಾಡಾನೆಗಳು ಹಾವಳಿ ಮುಂದುವರೆದಿದೆ. ವೆಂಕಟಸ್ವಾಮಿ ಎಂಬುವರಿಗೆ ಸೇರಿದ ತೋಟಕ್ಕೆ ರಾತ್ರಿ ವೇಳೆ ಆನೆಗಳು ನುಗ್ಗಿ ಅಡಿಕೆ, ಬಾಳೆ, ತೆಂಗು ಮರಗಳನ್ನು ನಾಶ ಮಾಡಿವೆ. 70ಕ್ಕೂ ಅಧಿಕ ಅಡಿಕೆ ಹಾಗೂ ತೆಂಗಿನ ಮರಗಳನ್ನು ನಾಶ ಮಾಡಿರುವ ಕಾಡಾನೆಗಳಿಂದ ಬೆಳೆಗಳಿಗೆ ರಕ್ಷಣೆ ಕೊಡಿ ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

ಅಲ್ಲದೇ ಇಲ್ಲಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳ ನಿರಂತರ ದಾಳಿಯಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

Edited By : Suman K
Kshetra Samachara

Kshetra Samachara

31/12/2024 01:03 pm

Cinque Terre

1.94 K

Cinque Terre

0

ಸಂಬಂಧಿತ ಸುದ್ದಿ