ಹೈದರಾಬಾದ್: ಚಿತ್ರಮಂದಿರದಲ್ಲಿ ಉಂಟಾದ ಕಾಲ್ತುಳಿತದಿಂದ ಮಹಿಳೆಯೊಬ್ಬರು ಮೃತಪಟ್ಟ ಪ್ರಕರಣದ ಆರೋಪಿ, ತೆಲುಗು ನಟ ಅಲ್ಲು ಅರ್ಜುನ್ ಅವರ ಜಾಮೀನು ಅರ್ಜಿ ಕುರಿತ ಆದೇಶವನ್ನು ಇಲ್ಲಿನ ನ್ಯಾಯಾಲಯ ಸೋಮವಾರ ಕಾಯ್ದಿರಿಸಿದೆ.
ಎರಡನೇ ಹೆಚ್ಚುವರಿ ಮೆಟ್ರೋಪಾಲಿಟನ್ ಸೆಷನ್ಸ್ ನ್ಯಾಯಾಧೀಶರು, ಜಾಮೀನು ಪ್ರಶ್ನಿಸಿ ಸಲ್ಲಿರುವ ಪೊಲೀಸರ ವಾದ ಮತ್ತು ನಟನ ಪರ ವಕೀಲರ ವಾದಗಳನ್ನು ಆಲಿಸಿದ ನಂತರ, ತಮ್ಮ ತೀರ್ಪನ್ನು 2025ರ ಜನವರಿ 3ಕ್ಕೆ ಕಾಯ್ದಿರಿಸಿದರು.
ಪ್ರಕರಣದ 11ನೇ ಆರೋಪಿಯಾಗಿರುವ ಅಲ್ಲು ಅರ್ಜುನ್ ಈ ಹಿಂದೆ ಜಾಮೀನು ಕೋರಿ ನ್ಯಾಯಾಲಯ ದಲ್ಲಿ ಅರ್ಜಿ ಸಲ್ಲಿಸಿದ್ದರು. ಡಿ. 27ರಂದು ವಿಡಿಯೊ ಕಾನ್ಫರೆನ್ಸ್ ಮೂಲಕ ಕೋರ್ಟ್ ವಿಚಾರಣೆಗೂ ಹಾಜರಾಗಿದ್ದರು.
PublicNext
31/12/2024 07:32 am