ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಮಾಶಂಕರ್ ಉಪಾಧ್ಯ ನೇತೃತ್ವದಲ್ಲಿ 15 ಜನರ ತಂಡ ಗೆಲ್ಲಿಸಿ - ಕುಮಾರಸ್ವಾಮಿ

ಉಮಾಶಂಕರ್ ಉಪಾಧ್ಯ ನೇತೃತ್ವದಲ್ಲಿ 15 ಜನರ ತಂಡ ಗೆಲ್ಲಿಸಿ - ಕುಮಾರಸ್ವಾಮಿ

ಶಿವಮೊಗ್ಗ : ಶಿವಮೊಗ್ಗ ಹೌಸಿಂಗ್ ಕೋ- ಆಪರೇಟಿವ್ ಸೊಸೈಟಿ ನಿರ್ದೇಶಕರ ಚುನಾವಣೆ ಜನವರಿ 12ರಂದು ನಡೆಯಲಿದ್ದು, ಈ ಚುನಾವಣೆಗೆ ಎಂ.ಉಮಾಶಂಕರ್ ಉಪಾಧ್ಯ ಅವರ ನೇತೃತ್ವದಲ್ಲಿ 15 ಜನರ ತಂಡವನ್ನು ರಚಿಸಿಕೊಳ್ಳಲಾಗಿದೆ. ಈ ತಂಡವನ್ನೇ ಗೆಲ್ಲಿಸಬೇಕು ಎಂದು ಸ್ಪರ್ಧಿಸಿರುವ ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ ಹೇಳಿದರು. ಶಿವಮೊಗ್ಗ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಯಲ್ಲಿ 15ಸ್ಥಾನಗಳಿದ್ದು, 3063 ಮತದಾರರಿದ್ದಾರೆ. ಕಳೆದ ಅವಧಿಯಲ್ಲಿ ಆಡಳಿತದಲ್ಲಿದ್ದವರ ನಿವೇಶನ ಸೇರಿದಂತೆ ಸದಸ್ಯರಿಗೆ ಯಾವ ಅನುಕೂಲವನ್ನು ಮಾಡಲಿಲ್ಲ. ಆಡಳಿತ ಮಂಡಳಿ ಯಲ್ಲಿ ಸಂಪೂರ್ಣ ನಿಷ್ಕ್ರಿಯವಾಗಿತ್ತು ಎಂದು ಆರೋಪಿಸಿದರು.

ಈ ಎಲ್ಲಾ ಹಿನ್ನೆಲೆಯಲ್ಲಿ ಸದಸ್ಯರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಲು ಮತ್ತು ನಿವೇಶನ ಹಾಗೂ ಮನೆ ನೀಡುವ ಉದ್ದೇಶದಿಂದ ನಾವು ಹೊಸ ತಂಡವನ್ನೇ ಕಟ್ಟಿಕೊಂಡಿದ್ದೇವೆ. ನಮ್ಮ ಹೊಸ ತಂಡ ಅಧಿಕಾರಕ್ಕೆ ಬಂದರೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಸದಸ್ಯರಿಗೆ ನೀಡುತ್ತೇವೆ. ನಮ್ಮನ್ನೆ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

Edited By : PublicNext Desk
Kshetra Samachara

Kshetra Samachara

08/01/2025 04:06 pm

Cinque Terre

5.84 K

Cinque Terre

0

ಸಂಬಂಧಿತ ಸುದ್ದಿ