1. ಹೆಚ್ಚುತ್ತಿವೆ ಮನೆಗಳ್ಳತನ
ಹುಬ್ಬಳ್ಳಿ-ದಾರವಾಡದಲ್ಲಿ ಇತ್ತೀಚೆಗೆ ಮನೆಗಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಬೀಗ ಹಾಕಿದ ಮನೆಗಳನ್ನು ಕಳ್ಳರು ಟಾರ್ಗೆಟ್ ಮಾಡ್ತಿದ್ದಾರೆ. ಇದರಿಂದ ನಾಗರಿಕರು ನಿದ್ದೆಗೆಡುವಂತಾಗಿದ್ದು, ಕಳ್ಳತನ ಪ್ರಕರಣಗಳನ್ನು ಮಟ್ಟ ಹಾಕೋದಾಗಿ ಪೊಲೀಸ್ ಆಯಕ್ತ ಲಾಬೂರಾಮ್ ಹೇಳಿದ್ದಾರೆ.
https://publicnext.com/article/nid/Hubballi-Dharwad/Crime/Law-and-Order/node=625433
2. ಶಾಂತಿ ಕದಡಬೇಡಿ
ರಾಜ್ಯ ಹಾಗೂ ದೇಶ ಸರ್ವಜನಾಂಗದ ಶಾಂತಿಯ ತೋಟ. ಇಲ್ಲಿನ ಸಾಮರಸ್ಯವನ್ನು ಕೆಡಿಸಬೇಡಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಬೆಲೆ ಏರಿಕೆ ನಿಯಂತ್ರಿಸಲು ಸರ್ಕಾರವನ್ನು ಒತ್ತಾಯಿಸಿದ್ದಾರೆ.
https://publicnext.com/article/nid/Hubballi-Dharwad/Politics/node=625561
3. ಸಿದ್ದರಾಮಯ್ಯ ಕ್ಷಮೆ ಕೇಳಬೇಕು
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮತ್ತೆ ಹಿಜಾಬ್ ವಿವಾದವನ್ನು ಮುನ್ನಲೆಗೆ ತಂದಿದ್ದಾರೆ.ಸ್ವಾಮೀಜಿಗಲ ಪೇಟಾ ಬಗ್ಗೆ ಮಾತನಾಡಿ ವಿವಾದ ಸೃಷ್ಟಿಸಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಅವರು ಕ್ಷಮೆ ಕೇಳಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಒತ್ತಾಯಿಸಿದ್ದಾರೆ.
https://publicnext.com/article/nid/Hubballi-Dharwad/Politics/node=625435
4. ಮಾನಸಿಕ ಆರೋಗ್ಯಕ್ಕೆ ಪಿರಮಿಡ್ ಧ್ಯಾನ
ಹುಬ್ಬಳ್ಳಿಯ ನೃಪತುಂಗ ಬೆಟ್ಟದ ಆವರಣದಲ್ಲಿರುವ ಪಿರಾಮಿಡ್ ಧ್ಯಾನ ಕೇಂದ್ರ ಸ್ತಳೀಯರಿಗೆ ಮಾನಸಿಕ ನೆಮ್ಮದಿ ನೀಡುತ್ತಿದೆ. ಧ್ಯಾನ ಕೂಡ ಒಂದು ಮಾನಸಿಕ ಚಿಕಿತ್ಸಾ ವಿಧಾನ. ನಿತ್ಯ ಧ್ಯಾನ ಮಾಡುವವರು ದೈಹಿಕವಾಗಿಯೂ ಆರೋಗ್ಯದಿಂದ ಇರಬಲ್ಲರು ಎಂದು ಮಾನಸಿಕ ರೋಗಗಳ ತಜ್ಷ ವೈದ್ಯ ಡಾ. ಆನಂದ್ ಪಾಂಡುರಂಗಿ ಹೇಳಿದ್ದಾರೆ.
https://publicnext.com/article/nid/Hubballi-Dharwad/Cultural-Activity/node=625313
5. ಕೃಷಿ ಮೇಳಕ್ಕೆ ಸಿದ್ಧತೆ
ಕೊರೊನಾದಿಂದ ವಿಳಂಬವಾಗಿದ್ದ ಧಾರವಾಡ ಕೃಷಿ ಮೇಳವನ್ನು ಈ ಬಾರಿ ಏಪ್ರಿಲ್ ತಿಂಗಳಲ್ಲಿ ನಡೆಸಲು ಕೃಷಿ ವಿಶ್ವವಿದ್ಯಾಲಯ ನಿರ್ಧರಿಸಿದೆ. ಸರ್ಕಾರದಿಂದ ಕೃಷಿ ಮೇಳಕ್ಕೆ ಈಗಾಗಲೇ ಅನುಮತಿ ದೊರೆತಿದೆ. ಇದಕ್ಕಾಗಿ ವಿಶ್ವವಿದ್ಯಾಲಯ ಆವರಣದಲ್ಲಿ ಪೂರ್ವಸಿದ್ಧತೆ ಕಾರ್ಯಗಳು ಆರಂಭವಾಗಿವೆ.
https://publicnext.com/article/nid/Hubballi-Dharwad/Agriculture/node=625528
6.ಎಸ್ಕಲೇಟರ್ ಆರಂಭ
ಹುಬ್ಬಳ್ಳಿಯ ರೈಲು ನಿಲ್ದಾಣದಲ್ಲಿ ನಿರ್ಮಾಣವಾಗಿದ್ದ ಎಸ್ಕಲೇಟರ್ ಸಾರ್ವನಿಕರ ಬಳಕೆಗೆ ಮುಕ್ತವಾಗಿರಲಿಲ್ಲ. ಈ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿ ಬಿತ್ತರಿಸಿತ್ತು. ನಂತರ ಎಚ್ಚೆತ್ತುಕೊಂಡ ರೈಲ್ವೇ ಅಧಿಕಾರಿಗಳು ಎಸ್ಕಲೇಟರ್‌ಅನ್ನ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಿದ್ದಾರೆ.
https://publicnext.com/article/nid/Hubballi-Dharwad/Infrastructure/node=625270
7. ಏನ್ ಧೂಳ್ ರೀ ಯಪ್ಪಾ..
ಅವಳಿ ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಯುತ್ತಿರೋದ್ರಿಂದ ಕಣ್ಣಿಗೆ ಧೂಳು ರಾಚುತ್ತಿದೆ. ಇನ್ನೊಂದೆಡೆ ಇದೇ ಕಾರಣಕ್ಕೆ ಸಂಚಾರ ದಟ್ಟಣೆಯೂ ಹೆಚ್ಚಾಗುತ್ತಿದೆ. ಈ ಸಮಸ್ಯೆಯಿಂದ ನಮಗೆ ಮುಕ್ತಿ ಬೇಕು ಎಂಬುದು ನಿತ್ಯ ವಾಹನ ಸವಾರರ ಒತ್ತಾಯವಾಗಿದೆ.
https://publicnext.com/article/nid/Hubballi-Dharwad/Infrastructure/node=625326
8. ಹುಬ್ಬಳ್ಳಿಯಲ್ಲಿ ಆರ್‌ಆರ್‌ಆರ್ ಹವಾ
ಎಸ್. ಎಸ್ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಸಿನಿಮಾ ಹುಬ್ಬಳ್ಳಿ-ಧಾರವಾಡದಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಹುಬ್ಬಳ್ಳಿಯ ಶೃಂಗಾರ ಹಾಗೂ ಇತರ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿದ ಚಿತ್ರರಸಿಕರು ಜ್ಯೂನಿಯರ್ ಎನ್‌ಟಿಆರ್ ನಟನೆಯನ್ನು ಕಣ್ತುಂಬಿಕೊಂಡಿದ್ದಾರೆ.
https://publicnext.com/article/nid/Hubballi-Dharwad/Cinema/node=625449
9. ಬೆಂಗೇರಿ ಗ್ರಾಮದೇವತೆ ಜಾತ್ರೆ
ಸರಿಯಾಗಿ ೨೧ ವರ್ಷಗಳ ನಂತರ ಹುಬ್ಬಳ್ಳಿಯ ಬೆಂಗೇರಿಯ ಗ್ರಾಮದೇವತೆಗಳ ಜಾತ್ರ ನಡೆಯುತ್ತಿದೆ. ಇದರ ಅಂಗವಾಗಿ ದ್ಯಾಮಮ್ಮ ಹಾಗೂ ದುರ್ಗಮ್ಮ ದೇವಿಯರ ಅದ್ಧೂರಿ ಮೆರವಣಿಗೆ ನಡೆದಿದೆ. ಭಕ್ತರು ಉತ್ಸುಕರಾಗಿ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.
https://publicnext.com/article/nid/Hubballi-Dharwad/Religion/node=625510
10. ಕೊಚ್ಚಿ ಹೋದ ಧಾನ್ಯ ರಾಶಿ
ನಿನ್ನೆ ಗುರುವಾರ ನವಲಗುಂದ ತಾಲೂಕಿನ ಹಲವೆಡೆ ಸುರಿದ ಮಳೆಯಿಂದ ರೈತರಿಗೆ ನಷ್ಟವಾಗಿದೆ. ಹಲವೆಡೆ ರಾಶಿ ಮಾಡಿದ್ದ ಧಾನ್ಯಗಳು ಮಳೆ ನೀರಿಗೆ ಕೊಚ್ಚಿ ಹೋಗಿವೆ. ಈ ನಗ್ಗೆ ಅಧಿಕಾರಿಗಳು ಪರಿಶೀಲಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
https://publicnext.com/article/nid/Hubballi-Dharwad/Nature/node=625028
Kshetra Samachara
25/03/2022 10:06 pm