ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅವಳಿ ನಗರದಲ್ಲಿ ಎಗ್ಗಿಲ್ಲದೇ ನಡೀತಿದೆ ಕಳ್ಳತನ-ಬೀಗ ಹಾಕಿದ ಮನೆಗಳೇ ಖದೀಮರ ಟಾರ್ಗೆಟ್

ವರದಿ-ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಎಗ್ಗಿಲ್ಲದೇ ನಡೆಯುತ್ತಿವೆ ಮನೆ ಕಳ್ಳತನ. ಯಾವುದೇ ಕೆಲಸಕ್ಕೂ ಮನೆಯಿಂದ ಹೊರ ಹೋಗಲು ಹುಬ್ಬಳ್ಳಿ-ಧಾರವಾಡ ಜನರು ಭಯ ಪಡುವಂತಾಗಿದೆ. ಮನೆಗೆ ಬೀಗ್ ಹಾಕಿರುವುದನ್ನೇ ಟಾರ್ಗೆಟ್ ಮಾಡುವ ಖದೀಮರು ಅವಳಿನಗರದ ಜನರ ನಿದ್ದೆಗೆಡಿಸಿದ್ದಾರೆ.

ವೇಗವಾಗಿ ಬೆಳೆಯುತ್ತಿರುವ ಹುಬ್ಬಳ್ಳಿಯಲ್ಲಿ ಕ್ರೈಂ ಪ್ರಕರಣಗಳು ಅತಿವೇಗವಾಗಿಯೇ ಬೆಳೆಯುತ್ತಿವೆ. ಒಂದಿಲ್ಲೊಂದು ರೀತಿಯಲ್ಲಿ ಕ್ರೈಂ ಪ್ರಕರಣ ಹೆಚ್ಚುತ್ತಿದ್ದು, ಕಡಿವಾಣ ಮಾತ್ರ ಮರಿಚೀಕೆಯಾಗಿದೆ. ಹೌದು.ಇತ್ತೀಚಿನ ದಿನಗಳಲ್ಲಿ ಮನೆ ಕಳ್ಳತನ ಪ್ರಕರಣ ಎಗ್ಗಿಲ್ಲದೆ ನಡೆಯುತ್ತಿದೆ. ಮನೆಯಲ್ಲಿ ಯಾರು ಇಲ್ಲದೇ ಇರುವುದನ್ನೇ ಟಾರ್ಗೆಟ್ ಮಾಡಿಕೊಂಡ ಕಳ್ಳರು, ರಾತ್ರಿ ವೇಳೆಯಲ್ಲಿ ಮನೆಯ ಬೀಗ ಮುರಿದು ಮನೆಗೆ ನುಗ್ಗಿ ಹಣ ಹಾಗೂ ಚಿನ್ನಾಭರಣ ದೋಚಿಕೊಂಡು ಪರಾರಿಯಾಗುತ್ತಿದ್ದಾರೆ. ಅಲ್ಲದೇ ಮನೆಯ ಮುಂದೆ ಪಾರ್ಕ್ ಮಾಡಿದ ಬೈಕ್ ಕಳ್ಳತನ ಮಾಡುತ್ತಾರೆ. ಅವಳಿ ನಗರದ ಬಹುತೇಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಸರ್ವೆ ಸಾಮಾನ್ಯವಾಗಿದೆ. ಜನರು ಪೊಲೀಸ್ ಇಲಾಖೆಯ ವಿರುದ್ಧ ಈಗ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮನೆಯನ್ನು ವಾಚ್ ಮಾಡುವ ಖದೀಮರು ವ್ಯವಸ್ಥಿತ ರೀತಿಯಲ್ಲಿ ಸ್ಕೇಚ್ ಹಾಕಿ ಕಳ್ಳತನ ಮಾಡುತ್ತಾರೆ. ಈ ಬಗ್ಗೆ ಸಾಕಷ್ಟು ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಆದರೂ ಪತ್ತೆಯಾಗಿರುವುದು ಮಾತ್ರ ಬೆರಳು ಏಣಿಕೆಯಷ್ಟೇ. ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕಲು ಬೀಟ್ ವ್ಯವಸ್ಥೆ ಹಾಗೂ ಸಿಸಿ ಟಿವಿ ವ್ಯವಸ್ಥೆ ಮಾಡಲಾಗಿದೆ. ಎಲ್ಲ ವ್ಯವಸ್ಥೆ ಇದ್ದರೂ ಕ್ರೈಂ ರೇಟ್ ಮಾತ್ರ ಕಡಿಮೆ ಆಗುತ್ತಿಲ್ಲ. ಹೀಗಿದ್ದರೂ ಕ್ರೈಂ ಪ್ರಕರಣಕ್ಕೆ ಬ್ರೇಕ್ ಹಾಕುತ್ತೇವೆ ಎನ್ನುತ್ತಾರೆ ಪೊಲೀಸ್ ಆಯುಕ್ತರು.

ಒಟ್ಟಿನಲ್ಲಿ ಖದೀಮರ ಹಾವಳಿಯಿಂದ ಹುಬ್ಬಳ್ಳಿ ಧಾರವಾಡ ಜನರು ನೆಮ್ಮದಿಯ ನಿದ್ರೆ ಮಾಡುವುದೇ ಕಷ್ಟವಾಗಿದೆ. ಯಾವ ಸಮಯದಲ್ಲಿ ಬೇಕಾದರೂ ಕಳ್ಳತನ ಆಗಬಹುದೆಂಬ ಭಯದಲ್ಲಿಯೇ ಜನರು ಜೀವನ ನಡೆಸಬೇಕಾಗಿದೆ. ಇನ್ನಾದರೂ ಪೊಲೀಸ್ ಇಲಾಖೆ ಮತ್ತಷ್ಟು ಸೂಕ್ತ ಕ್ರಮಗಳನ್ನು ಜರುಗಿಸಿ ಜನರು ನೆಮ್ಮದಿಯ ಉಸಿರು ಬಿಡುವಂತೆ ಮಾಡಬೇಕಿದೆ.

Edited By : Nagesh Gaonkar
Kshetra Samachara

Kshetra Samachara

25/03/2022 03:06 pm

Cinque Terre

28.19 K

Cinque Terre

5

ಸಂಬಂಧಿತ ಸುದ್ದಿ