ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಗ್ರಾಮದೇವತೆಗಳ ಅದ್ಧೂರಿ ಮೆರವಣಿಗೆ

ಹುಬ್ಬಳ್ಳಿ : ಬರೋಬ್ಬರಿ 21 ವರ್ಷಗಳ ನಂತರ ನಡೆಯತ್ತಿರುವ ಹುಬ್ಬಳ್ಳಿಯ ಬೆಂಗೇರಿಯ ಗ್ರಾಮ ದೇವತೆಗಳಾದ ಶ್ರೀ ದ್ಯಾಮಮ್ಮ ದೇವಿ ಹಾಗೂ ದುರ್ಗಮ್ಮ ದೇವಿಯ ನೂತನ ಮೂರ್ತಿಗಳ ಮೆರವಣಿಗೆ ಅದ್ಧೂರಿಯಾಗಿ ಜರುಗಿತು.

ಇಂದು ಬೆಳಗ್ಗೆ ಕೇಶ್ವಾಪುರದ ಸರ್ವೋದಯ ಸರ್ಕಲ್ ದಿಂದ ಪ್ರಾರಂಭಗೊಂಡ ಗ್ರಾಮದೇವತೆಗಳ ಮೆರವಣಿಗೆ ರಮೇಶ ಭವನ, ನಾಗಶೆಟ್ಟಿಕೊಪ್ಪ, ಬೆಂಗೇರಿಯಲ್ಲಿ ಮಹಿಳೆಯರು ಕುಂಭಮೇಳ, ಡೊಳ್ಳು ಬಾರಿಸುತ್ತ ಟ್ರಾಕ್ಟರ್ ದಲ್ಲಿ ಪಲ್ಲಕ್ಕಿ ಮೂಲಕ ಮೆರವಣಿಗೆ ಮಾಡಿದರು.

ದೇವಿಯ ದರ್ಶನಕ್ಕೆ ಸಹಸ್ರಾರು ಜನ ಸೇರಿದ್ದು, ಮಾರ್ಗದುದ್ದಕ್ಕೂ ಭಕ್ತರು ಜಯಘೋಷಗಳನ್ನು ಕೂಗಿ ದೇವಿಯ ಕೃಪೆಗೆ ಪಾತ್ರರಾದರು.

Edited By : Manjunath H D
Kshetra Samachara

Kshetra Samachara

25/03/2022 05:03 pm

Cinque Terre

16.63 K

Cinque Terre

2

ಸಂಬಂಧಿತ ಸುದ್ದಿ