ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ತಾಲ್ಲೂಕಿನಲ್ಲಿ ಸುರಿದ ಭಾರಿ ಮಳೆಗೆ ಜನರ ಜೀವನ ನೀರು ಪಾಲು

ನವಲಗುಂದ: ನವಲಗುಂದ ಪಟ್ಟಣ ಸೇರಿದಂತೆ ಅಳಗವಾಡಿ, ಶಿಶುವಿನಹಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸುರಿದ ಭಾರಿ ಮಳೆಗೆ ರೈತರು, ಗ್ರಾಮಸ್ಥರು ತತ್ತರಿಸಿ ಹೋಗಿದ್ದಾರೆ. ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಸಿಗದೆ, ಇದ್ದ ಒಂದು ಆಶಯ ಕೂಡ ಕಿತ್ತು ಹೋದ ಪರಿಣಾಮ ಗ್ರಾಮಸ್ಥರು ಬೀದಿಗೆ ಬೀಳುವಂತಹ ಪರಿಸ್ಥಿತಿ ಬಂದಿದೆ.

ತಾಲ್ಲೂಕಿನಲ್ಲಿ ಸುರಿದ ಗುಡುಗು, ಸಿಡಿಲು ಸಹಿತ ಭಾರಿ ಮಳೆಗೆ ಅಳಗವಾಡಿ ಗ್ರಾಮದಲ್ಲಿ ರಾಶಿ ಮಾಡಲಾಗಿದ್ದ ಕಡಲೆ ಬೆಳೆ ಸಂಪೂರ್ಣ ನೀರಿನಲ್ಲಿ ಕೊಚ್ಚಿ ಹೋಗಿದೆ. ಇನ್ನು ಶಿಶ್ವಿನಹಳ್ಳಿ ಗ್ರಾಮದ ಶಿವಬಸವನಗರ ಆಶ್ರಯ ಕಾಲೋನಿ ಸೇರಿದಂತೆ ಗ್ರಾಮದಲ್ಲಿನ ಮಳೆಯ ಆರ್ಭಟಕ್ಕೆ ಮನೆಗಳು ಹಾನಿಯಾಗಿವೆ. ಇದರಿಂದ ಬಡವರ ಬದುಕು ಬೀದಿಗೆ ಬಂದಿದೆ.

ಸುಮಾರು ಎರಡು ಗಂಟೆಗೂ ಅಧಿಕ ಕಾಲ ಸುರಿದ ಮಳೆಗೆ ಮರ, ವಿದ್ಯುತ್ ಕಂಬ ಸಂಪೂರ್ಣ ನೆಲಕ್ಕಚ್ಚಿವೆ ಎಂದು ವರದಿಯಾಗಿದೆ. ಜನರು ವಿದ್ಯುತ್ ಇಲ್ಲದಂತೆ ಕತ್ತಲ್ಲಲ್ಲೇ ಕಾಲ ಕಳೆಯುವಂತಾಗಿದೆ. ಈ ಬಗ್ಗೆ ತಾಲೂಕಾ ಆಡಳಿತ ಹೆಚ್ಚಿನ ಗಮನ ಹರಿಸಿ, ನಿರಾಶ್ರಿತರಿಗೆ ಪರಿಹಾರ ನೀಡಲು ಮುಂದಾಗಬೇಕಿದೆ.

Edited By : Manjunath H D
Kshetra Samachara

Kshetra Samachara

24/03/2022 10:38 pm

Cinque Terre

49.55 K

Cinque Terre

4

ಸಂಬಂಧಿತ ಸುದ್ದಿ