ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: 'ಧ್ಯಾನ'ದಿಂದ ಮನೋದೈಹಿಕ ಸಮಸ್ಯೆಗೆ ಮುಕ್ತಿ; ಮನೋರೋಗ ತಜ್ಞ ಪಾಂಡುರಂಗಿ

ಹುಬ್ಬಳ್ಳಿ: ಹುಬ್ಬಳ್ಳಿಯ ನೃಪತುಂಗ ಬೆಟ್ಟದ ಕೆಳಗೆ ಇರುವ 'ಪಿರಾಮಿಡ್ ಧ್ಯಾನ ಕೇಂದ್ರ' ಬಹಳಷ್ಟು ಜನರಿಗೆ ಶಾಂತಿ-ಸಮಾಧಾನ ನೀಡುತ್ತಿದೆ. ಇದು ರಾಜ್ಯದಲ್ಲಿಯೇ 2ನೇ ಅತಿದೊಡ್ಡ ಕೇಂದ್ರ. ಉತ್ತರ ಕರ್ನಾಟಕದ ಜನರಿಗೆ ಈ ಬಗ್ಗೆ ತಿಳಿಸಬೇಕಿದೆ.

ಧ್ಯಾನ ಎನ್ನುವುದು ಒಂದು ಚಿಕಿತ್ಸಾ ವಿಧಾನ. ಇಲ್ಲಿಗೆ ಬಂದು ಧ್ಯಾನ ಮಾಡಿದವರ ಬಹಳಷ್ಟು ಮನೋದೈಹಿಕ ಸಮಸ್ಯೆಗಳು ನಿವಾರಣೆಯಾಗಿವೆ ಎಂದು ಖ್ಯಾತ ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಮನೋದೈಹಿಕ ವಿಶ್ರಾಂತಿ ಸಮಸ್ಯೆಯನ್ನು ನಿವಾರಿಸುತ್ತದೆ. ಶೂನ್ಯಾವಸ್ಥೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಧ್ಯಾನ ಮಹತ್ವದ ಪಾತ್ರ ವಹಿಸುತ್ತದೆ. ಮನಸ್ಸಿಗೆ ನೆಮ್ಮದಿಯೂ ಸಿಗುತ್ತದೆ ಎಂದರು.

Edited By : Vijay Kumar
Kshetra Samachara

Kshetra Samachara

25/03/2022 12:21 pm

Cinque Terre

6.09 K

Cinque Terre

0

ಸಂಬಂಧಿತ ಸುದ್ದಿ