ವರದಿ-ಮಲ್ಲೇಶ ಸೂರಣಗಿ
ಹುಬ್ಬಳ್ಳಿ: ಕೋವಿಡ್ ನಂತರ ಟ್ರೇನ್ ಸ್ಟಾರ್ಟ್ ಆಗಿದ್ದರೂ ಸಾರ್ವಜನಿಕರ ಉಪಯೋಗಕ್ಕೆ ನಿರ್ಮಾಣ ಮಾಡಿದ್ದ ಎಸ್ಕೆಲೇಟರ್ ಆರಂಭವಾಗಿರಲಿಲ್ಲ. ಈ ಕುರಿತು ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿ ಬಿತ್ತರಿಸಿದ ಬೆನ್ನಲ್ಲೇ ಎಸ್ಕೆಲೇಟರ್ ಆರಂಭವಾಗಿದ್ದು, ಈಗ ಸಾರ್ವಜನಿಕರು ಸರಾಗವಾಗಿ ಒಂದು ಪ್ಲಾಟ್ ಫಾರಂ ನಿಂದ ಮತ್ತೊಂದು ಪ್ಲಾಟ್ ಫಾರಂಗೆ ಹೋಗ ಬಹುದಾಗಿದೆ.
ನೈರುತ್ಯ ರೈಲ್ವೆ ವಲಯ ಹುಬ್ಬಳ್ಳಿಯು ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್ ಫಾರಂ ಎಂಬ ಹೆಗ್ಗಳಿಕೆಗೆ ಪಾತ್ರಾವಾಗಿದ್ದರೂ ಕೆಲವೊಂದು ಅವ್ಯವಸ್ಥೆಯಿಂದ ಸಾರ್ವಜನಿಕರು ಪರದಾಡುವಂತಾಗಿತ್ತು. ಈ ಕುರಿತು ನಿಮ್ಮ ಪಬ್ಲಿಕ್ ನೆಕ್ಸ್ಟ್ 'ಟ್ರೇನ್ ಸ್ಟಾರ್ಟ್ ಆದರೂ ಎಸ್ಕೆಲೇಟರ್ ಸ್ಟಾರ್ಟ್ ಆಗಿಲ್ಲ' ಎಂಬುವಂತ ಶೀರ್ಷಿಕೆ ಅಡಿಯಲ್ಲಿ ಸ್ಟೋರಿಯೊಂದನ್ನು ಪ್ರಸಾರ ಮಾಡಿತ್ತು. ಸ್ಟೋರಿಯಿಂದ ಎಚ್ಚೆತ್ತುಕೊಂಡ ರೈಲ್ವೆ ಇಲಾಖೆ ಈಗ ಸೇವೆಯನ್ನು ಆರಂಭ ಮಾಡಿದೆ.
ಎಸ್ಕೆಲೇಟರ್ ಬಂದ ಆಗಿದ್ದ ಹಿನ್ನೆಲೆಯಲ್ಲಿ ವೃದ್ಧರು, ಮಹಿಳೆಯರು, ಮಕ್ಕಳು ಓಡಾಡುವಲ್ಲಿ ಹೈರಾಣಾಗಿದ್ದರು. ಈ ಕುರಿತು ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿ ಪ್ರಸಾರ ಮಾಡಿ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಈಗ ಜನರು ನೆಮ್ಮದಿಯಿಂದ ಒಂದು ಪ್ಲಾಟ್ ಫಾರಂ ನಿಂದ ಮತ್ತೊಂದು ಪ್ಲಾಟ್ ಫಾರಂಗೆ ಹೋಗಬಹುದಾಗಿದೆ.
Kshetra Samachara
25/03/2022 11:38 am