ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಿವಿಧ ಬೇಡಿಕೆಗೆ ಆಗ್ರಹಿಸಿ ಮತ್ತೆ ಹೋರಾಟಕ್ಕೆ ಮುಂದಾದ ಪೌರಕಾರ್ಮಿಕರು, ಬೆಳಗಾವಿ ಅಧಿವೇಶನಕ್ಕೆ ಮುತ್ತಿಗೆ ಎಚ್ಚರಿಕೆ

ಹುಬ್ಬಳ್ಳಿ: ಸಿಟಿ ಸ್ವಚ್ಚಂದವಾಗಿ ಕಾಣಬೇಕಾದ್ರೆ ಅದಕ್ಕೆ ಪೌರಕಾರ್ಮಿಕರ ಪಾತ್ರ ಮುಖ್ಯವಾಗಿರುತ್ತದೆ. ಆದ್ರೆ ಮಹಾನಗರ ಪಾಲಿಕೆ ಮಾತ್ರ ಈ ಎಲ್ಲ ಪೌರಕಾರ್ಮಿಕರಿಗೆ ಅನ್ಯಾಯ ಮಾಡ್ತಿದೆ. ಪೌರಕಾರ್ಮಿಕರ ನೇರ ನೇಮಕಾತಿ ಮತ್ತು ನೇರವೇತನ ಪಾವತಿಗೆ ಆದೇಶ ಹೊರಡಿಸಿ 8 ವರ್ಷಗಳು ಗತಿಸಿದ್ರೂ ಕೂಡ, ಪಾಲಿಕೆ ಮಾತ್ರ ಈವರೆಗೂ ಯಾರನ್ನೂ ನೇಮಕಾತಿ ಮಾಡಿಕೊಳ್ಳದೆ ಮಲತಾಯಿ ಧೋರಣೆ ಮಾಡ್ತಿದೆ ಎಂದು ಮತ್ತೆ ಹೋರಾಟ ಮಾಡಲು ಮತ್ತು ಬೆಳಗಾವಿ ಅಧಿವೇಶನಕ್ಕೆ ಮುತ್ತಿಗೆ ಹಾಕಲು ಎಚ್ಚರಿಕೆ ನೀಡುತ್ತಿದ್ದಾರೆ.

ಹೌದು,,, ಈಗಾಗಲೇ ಪೌರಕಾರ್ಮಿಕರು ನೇರ ನೇಮಕಾತಿ, ಮತ್ತು ನೇರ ವೇತನ ಸೇರಿದಂತೆ ವಿವಿಧ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ, ನೂರಾರು ಪೌರಕಾರ್ಮಿಕರು ಸತತವಾಗಿ ಅದೆಷ್ಟೋ ಬಾರಿ ಪಾಲಿಕೆ ಮುಂದೆ ಅಹೋರಾತ್ರಿ ಹೋರಾಟ ಮಾಡ್ತಾ ಬಂದಿದ್ದಾರೆ. ಈಗ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ಆರಂಭವಾಗಿದ್ದು, ಅದಕ್ಕಾಗಿ ನೂರಾರು ಪೌರಕಾರ್ಮಿಕರು ಇದೇ ಡಿಸೆಂಬರ್ 11 ಕ್ಕೆ ಪಾಲಿಕೆ ಮುಂದೆ ಅನಿರ್ದಿಷ್ಟ ಅಹೋರಾತ್ರಿ ಹೋರಾಟ ಮಾಡಿ ಡಿಸೆಂಬರ್ 18 ರಂದು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ.

ಪಾಲಿಕೆಯ ಸುಮಾರು 870 ಪೌರಕಾರ್ಮಿಕರನ್ನು ಇದುವರೆಗೂ ಪಾಲಿಕೆ ಮಾತ್ರ ನೇರ ನೇಮಕಾತಿ ಮಾಡಿಕೊಂಡಿಲ್ಲ. ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲೂ ಕೂಡ ಪೌರಕಾರ್ಮಿಕರಿಗೆ ನೇರವೇತನ ಪಾವತಿ ಮಾಡಬೇಕೆಂದು ಠರಾವ್ ಕೂಡ ಪಾಸ್ ಮಾಡಿದ್ದರು. ಆದ್ರೆ ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಅದಕ್ಕಾಗಿ ಎಲ್ಲ ಸ್ವಚ್ಚತಾ ಕಾರ್ಯವನ್ಮು ಬಿಟ್ಟು ಪೌರಕಾರ್ಮಿಕರು ಮತ್ತೆ ಹೋರಾಟಕ್ಕೆ ಮುಂದಾಗಿದ್ದಾರೆ.

ಇನ್ನು ದೇವರು ವರ ಕೊಟ್ರು ಪೂಜಾರಿ ಕೊಡ್ಲಿಲ್ಲ ಎಂಬಂತೆ ಸರ್ಕಾರ ಆದೇಶ ಮಾಡಿದ್ರೂ ಕೂಡ ಪೌರಕಾರ್ಮಿಕರ ನೇರ ನೇಮಕಾತಿ, ನೇರ ವೇತನ ನೀಡಲು ಪಾಲಿಕೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆಂದು ಪೌರಕಾರ್ಮಿಕರು ಆರೋಪ ಮಾಡ್ತಿದ್ದಾರೆ. ಅದಕ್ಕಾಗಿ ಮತ್ತೆ ಸರ್ಕಾರದ ಗಮನಕ್ಕೆ ತರಲು ಅಧಿವೇಶನಕ್ಕೆ ಮುತ್ತಿಗೆ ಹಾಕಲು ಪೌರಕಾರ್ಮಿಕರು ಸಜ್ಜಾಗುತ್ತಿದ್ದಾರೆ.

ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

10/12/2024 05:27 pm

Cinque Terre

43.63 K

Cinque Terre

0

ಸಂಬಂಧಿತ ಸುದ್ದಿ