ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅವಳಿನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ- ಹೆಚ್ಚಿದ ಟ್ರಾಫಿಕ್ ಕಿರಿಕಿರಿ

ಪಬ್ಲಿಕ್ ನೆಕ್ಸ್ಟ್- ಈರಣ್ಣ ವಾಲಿಕಾರ

ಹುಬ್ಬಳ್ಳಿ: ಅವಳಿನಗರದಲ್ಲಿ ಸಿಟಿ ಕಾಮಗಾರಿ ಸೇರಿದಂತೆ ಫ್ಲೈ ಓವರ್ ಕಾಮಗಾರಿಗಳು ನಡೆಯುತ್ತಿದ್ದು, ಬಿರು ಬಿಸಿಲು ಹಾಗೂ ಧೂಳಿನ ಮಧ್ಯೆ ಟ್ರಾಫಿಕ್ ಕಿರಿಕಿರಿಯಿಂದಾಗಿ ಚಾಲಕರು, ಸವಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ವಾಣಿಜ್ಯ ನಗರಿಯಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ಹೆಚ್ಚುತ್ತಿದ್ದು, ಹುಬ್ಬಳ್ಳಿಯ ಪುಣೆ-ಬೆಂಗಳೂರು ರಸ್ತೆ ತಾತ್ಕಾಲಿಕ ಬಂದ್ ಮಾಡಿದ್ದು, ಬೇರೆಡೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರೂ ಸಹ ವಾಹನ ಸವಾರರು ಟ್ರಾಫಿಕನಿಂದ ಬಳಲುವಂತಾಗಿದೆ. ಗೋಕುಲ್ ರಸ್ತೆ, ಹೊಸ ಕೋರ್ಟ್‌ಗೆ ತೆರಳುವ ರಸ್ತೆ, ದುರ್ಗದಬೈಲ್ ಬಳಿ ಇರುವ ರಸ್ತೆ ಸೇರಿದಂತೆ ವಿವಿಧೆಡೆ ರಸ್ತೆಗಳಲ್ಲಿ ಅಲ್ಲಲ್ಲಿ ಕಾಮಗಾರಿಗಳು ಆರಂಭಗೊಂಡ ಹಿನ್ನೆಲೆಯಲ್ಲಿ ಟ್ರಾಫಿಕ್ ದಟ್ಟವಾಗಿ ಕಂಡು ಬರುತ್ತಿದೆ.

ಒಟ್ಟಾರೆಯಾಗಿ ಸದ್ಯದ ಪರಿಸ್ಥಿತಿ ಈಗ ಗಮನಿಸಿದರೇ ಮುಂದಿನ ದಿನಗಳಲ್ಲಿ ಹುಬ್ಬಳ್ಳಿ ಜನತೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಲು ಸನ್ನದ್ಧರಾಗಬೇಕಿದೆ. ಇನ್ನೂ ಬೀದಿ ಬದಿ ವ್ಯಾಪಾರಸ್ಥರು ಕಾಮಗಾರಿಯಿಂದ ಕೆಂಗಟ್ಟು ಹೋಗಿದ್ದು, ವ್ಯಾಪಾರ ಮಾಡುವುದೇ ದುಸ್ತರವಾಗಿದೆ. ಸ್ಮಾರ್ಟ್ ಸಿಟಿ ಕಾಮಗಾರಿ ಹಾಗೂ ಪ್ಲೈಓವರ್ ಕಾಮಗಾರಿಗಳು ಚುರುಕುಗೊಂಡಂತೆ ಹುಬ್ಬಳ್ಳಿಯಲ್ಲಿ ಟ್ರಾಫಿಕ್ ಜಾಮ್ ಸರಿಪಡಿಸಲು ಸಂಬಂಧಿಸಿದ ಅಧಿಕಾರಿಗಳು ಹರಸಾಹಸ ಪಡಬೇಕಿದೆ.

Edited By : Nagesh Gaonkar
Kshetra Samachara

Kshetra Samachara

25/03/2022 12:31 pm

Cinque Terre

47.18 K

Cinque Terre

8

ಸಂಬಂಧಿತ ಸುದ್ದಿ