ಬೆಂಗಳೂರು : ಅವರದು ಸಣ್ಣ ಕುಟುಂಬ ಇಬ್ಬರು ಮಕ್ಕಳೊಂದಿಗೆ ಸಣ್ಣದಾದ ಗುಡಿಸಲು ಮನೆಯಲ್ಲಿ ವಾಸ ಮಾಡುತ್ತಿದ್ದಾರೆ.
ಗಂಡ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಹೆಂಡತಿ ಹೂವು ಮಾರುವ ಕೆಲಸ ಮಾಡುತ್ತಿದ್ದಾರೆ. ಈ ಬಡಕುಟುಂಬ ಸಣ್ಣದಾದ ಹಳೆಯ ಗುಡಿಸಿನಲ್ಲಿ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಆದರೆ ಮಳೆರಾಯ ಈ ಬಡ ಕುಟುಂಬಕ್ಕೆ ಶಾಪವಾಗಿದೆ.
ಹೌದು ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಇವರ ಗುಡಿಸಲು ಬೀಳುವ ಹಂತಕ್ಕೆ ತಲುಪಿದೆ. ಇಟ್ಟಿಗೆ ಕಲ್ಲು ಮತ್ತು ಮಣ್ಣು ಉಪಯೋಗಿಸಿ ನಿರ್ಮಾಣ ಮಾಡಿರುವ ಗುಡಿಸಲು ಈಗ ಬೀಳುವ ಹಂತಕ್ಕೆ ತಲುಪಿದೆ.
ಮಳೆ ಬಂದರೆ ಸಾಕು ಗುಡಿಸಲಿನ ಮುಂದೆ ನೀರು ತುಂಬಿ ಗುಡಿಸಿಲಿನ ಗೋಡೆಗಳನ್ನು ದುರ್ಬಲಗೊಳಿಸುತ್ತದೆ. ಇದರಿಂದ ಗುಡಿಸಿಲಿನ ಹಲವಾರು ಭಾಗದಲ್ಲಿ ಬಿರುಕುಬಿಟ್ಟಿದ್ದು ಯಾವಾಗ ಬೇಕಾದರೂ ಗುಡಿಸಲು ಬೀಳುವ ಭೀತಿಯಲ್ಲಿ ಅವರ ಜೀವನ ಸಾಗಿಸುತ್ತಿದ್ದಾರೆ.
ಮಳೆ ಬಂದಾಗ ಗುಡಿಸಿಲಿನ ಅಂಚಿನಿಂದ ನೀರು ಮನೆಯ ಒಳಗೆ ಬರುತ್ತದೆ ಇದರಿಂದ ಈ ಕುಟುಂಬ ಸಂಸಾರ ಕೂಡ ಮಾಡದ ಸ್ಥಿತಿಯಲ್ಲಿದೆ. ಎಷ್ಟೋಬಾರಿ ಬಿಬಿಎಂಪಿ ಕಚೇರಿ ಮೆಟ್ಟಿಲು ಹತ್ತಿದರು ಯಾವುದೇ ಪರಿಹಾರ ಸಿಕ್ಕಿಲ್ಲ. ಈ ಕುಟುಂಬವು ಈಗ ಸ್ಥಳೀಯ ಶಾಸಕ ರಾಮಲಿಂಗ ರೆಡ್ಡಿ ಅವರ ಸಹಾಯ ಕೇಳುತ್ತಿದೆ.
ಅನಾಹುತ ನಡೆದ ಮೇಲೆ ಎಚ್ಚೆತ್ತುಕೊಳ್ಳುವ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಕುಟುಂಬಕ್ಕೆ ದಾರಿ ತೋರಿಸಬೇಕು. ಮತ್ತು ಸ್ಥಳೀಯ ಶಾಸಕ ರಾಮಲಿಂಗಾರೆಡ್ಡಿ ಈ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಿಸಬೇಕೆಂದು ಕುಟುಂಬ ಆಶಿಸುತ್ತಿದೆ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
07/09/2022 09:29 pm