ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬೈಕ್‌ಗೆ ಟಚ್‌ ಮಾಡಿಸಿದ್ದಕ್ಕೆ ಬಿಎಂಟಿಸಿ ಚಾಲಕನ ಮೇಲೆ ಹಲ್ಲೆ

ಬೆಂಗಳೂರು: ಬೈಕ್‌ಗೆ ಟಚ್‌ ಮಾಡಿಸಿದ್ದಕ್ಕೆ ಬಿಎಂಟಿಸಿ ಚಾಲಕನ ಮೇಲೆ ಏಕಾಏಕಿ ಹಲ್ಲೆ ಮಾಡಿರುವ ಘಟನೆ ಸಿಲಿಕಾನ್‌ ಸಿಟಿಯಲ್ಲಿ ನಡೆದಿದೆ.

ಜಾಲಹಳ್ಳಿ ಕ್ರಾಸ್‌ನಿಂದ ಕೆಆರ್ ಮಾರ್ಕೆಟ್‌ಗೆ ತೆರಳುತ್ತಿದ್ದ ಬಸ್ ಸುಮ್ಮನಹಳ್ಳಿ ಬ್ರಿಡ್ಜ್ ಬಳಿ ಬಲಭಾಗದಲ್ಲಿದ್ದ ಬೈಕ್‌ಗೆ ಬಸ್‌ ಟಚ್‌ ಆಗಿದೆ. ಇದೇ ವಿಚಾರಕ್ಕೆ ಬಸ್‌ವೊಳಗೆ ನುಗ್ಗಿ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.. ಇದ್ರಿಂದ ಬಸ್‌ ಚಾಲಕ ಅಲ್ಲೆ ಕುಸಿದು ಬಿದ್ದಿದ್ದಾನೆ.

ಡಿಪೋ 22ರ ವ್ಯಾಪ್ತಿಗೆ ಕೆಲಸ ಮಾಡ್ತಿದ್ದ ಅಮರೇಶ್ ಎಂಬಾತ ಬಸ್ ಚಾಲಕನ ಮೇಲೆ ಹಲ್ಲೆ ನಡೆದಿದೆ. ಮಹಿಳೆಯೋರ್ವಳು ಚಲಾಯಿಸುತ್ತಿದ್ದ ಬೈಕ್‌ಗೆ ಬಸ್ ಟಚ್ ಆದ ಕಾರಣ ಮಹಿಳೆ ತನ್ನ ಕಡೆಯವರನ್ನು ಕರೆಸಿ ಹೊಡೆಸಿರುವ ಆರೋಪ ಕೇಳಿಬಂದಿದೆ.

ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಾಲಕನಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.

Edited By : Shivu K
PublicNext

PublicNext

14/12/2024 10:35 pm

Cinque Terre

10.07 K

Cinque Terre

3