ಬೆಂಗಳೂರು: ಅಗ್ನಿಶಾಮಕ ಸಿಬ್ಬಂದಿ ಇಂದು ಮುಂಜಾನೆ ಮಾಂಜಾ ದಾರಕ್ಕೆ ಸಿಲುಕಿ ರಕ್ತಸಿಕ್ತವಾಗಿದ್ದ ಗಿಳಿಗಳನ್ನ ರಕ್ಷಿಸಿದ್ದಾರೆ. ಗಿಳಿ ರಕ್ಷಿಸಿ ಅಗ್ನಿಶಾಮಕ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ. ಎರಡು ಗಿಳಿಗಳು ಗಾಳಿ ಪಟದ ಮಾಂಜಾದಾರಕ್ಕೆ ಸಿಲುಕಿ ಒದ್ದಾಡಿದ್ವು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿರುವ ಮರಕ್ಕೆ ಸಿಲುಕಿದ್ದ ಗಾಳಿ ಪಟ ದಾರಕ್ಕೆ ಒಟ್ಟಿಗೆ ಸಿಲುಕಿದ್ದ 2 ಗಿಳಿಗಳ ಪೈಕಿ ಒಂದು ಗಿಳಿಗೆ ರೆಕ್ಕೆಗೆ ದಾರ ಸುತ್ತಿಕೊಂಡ್ರೆ ಮತ್ತೊಂದು ಗಿಳಿಯ ಕಾಲಿಗೆ ದಾರ ಸುತ್ತಿಕೊಂಡಿತ್ತು. ವಿಚಾರ ತಿಳಿದು ಸ್ಥಳಕ್ಕಾಗಮಿಸಿದ್ದ ಅಗ್ನಿಶಾಮಕ ಸಿಬ್ಬಂದಿ ಮರದಲ್ಲಿನ ದಾರಕ್ಕೆ ಸಿಲುಕಿದ್ದ ಎರಡು ಗಿಳಿಗಳ ರಕ್ಷಣೆ ಮಾಡಿದ್ದಾರೆ.
PublicNext
14/12/2024 01:09 pm