ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಸ್ತೆಗಳ ಸಮಸ್ಯೆಗೆ ಕೊನೆಯೇ ಇಲ್ಲ.. ಒಂದು ಕಡೆ ರಸ್ತೆ ಸರಿ ಇರಲ್ಲ ಮತ್ತೊಂದು ಕಡೆ ರಸ್ತೆ ಚೆನ್ನಾಗಿದ್ರು ಮತ್ತೆ ಅದನ್ನ ಅಗೆದು ಹಾಳ್ ಮಾಡ್ತಾರೆ.
ಹೌದು, ಇದೇ ತರದ ಪರಿಸ್ಥಿತಿ ನಾಗದೇವನಹಳ್ಳಿ, ಉಪಾಧ್ಯ ಲೇಔಟ್, ಗಾನರಿದ್ದಿ ಅಪಾರ್ಟ್ಮೆಂಟ್ ಗೆ ಹೋಗುವ ರಸ್ತೆಯಲ್ಲಿ ಆಗಿದೆ. ರಾಜಕಾಲುವೆ ಪಕ್ಕದಲ್ಲಿ ಇದ್ದ ರಸ್ತೆಯನ್ನು ಅಗೆದು ಹಾಗೆ ಬಿಟ್ಟಿದ್ದಾರೆ. ಇನ್ನು ರಾತ್ರಿ ವೇಳೆ ಈ ರಸ್ತೆಯಲ್ಲಿ ಸಂಚಾರ ಮಾಡೋರು ಎಚ್ಚರದಿಂದ ವಾಹನ ಓಡಿಸಬೇಕು, ಇಲ್ಲ ಅಂದ್ರೆ ಅಪಘಾತ ಆಗೋದು ಖಂಡಿತ. ಯಾಕಂದ್ರೆ ಈ ರಸ್ತೆಯಲ್ಲಿ ಬೀದಿ ದೀಪನು ಇಲ್ಲ, ರಸ್ತೆ ಗುಂಡಿ ಇರುವ ಕಡೆ ಯಾವುದೇ ಬ್ಯಾರಿಕೇಡ್ ಕೂಡ ಇಟ್ಟಿಲ್ಲ...
(1:03 ಸೆಕೆಂಡ್ ಇರುವ ವಿಡಿಯೋ ದಲ್ಲಿ ಆಡಿಯೋ ಇದೆ ಅದನ್ನ ಬಳಸಿ....ನಂತರ 26 ಸೆಕೆಂಡ್ಸ್ ಇರುವ ವಿಡಿಯೋ ಫ್ಲೋ ಕೊಡಿ....)
ಇನ್ನು ಈ ಬಗ್ಗೆ ಬಿಬಿಎಂಪಿ ಕೂಡ ತಲೆ ಕೆಡಿಸಿಕೊಳ್ಳುತ್ತಿಲ್ಲ, ಎಷ್ಟು ಬಾರಿ ಕಂಪ್ಲೇಂಟ್ ಮಾಡಿದ್ರು ಸ್ಪಂದಿಸುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
PublicNext
14/12/2024 03:27 pm