ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಖಾಕಿಯೊಳಗೊಬ್ಬ ಕವಿ - ಹತ್ತಾರು ಕವನ ಸಂಕಲನ ಬರೆದ ಇನ್ಸ್‌ಪೆಕ್ಟರ್ ಅನಿಲ್

ಬೆಂಗಳೂರು: ಪೊಲೀಸ್ರು ಅಂದ್ರೆ ಸದಾ ಶಿಸ್ತು, ಗದರೋ ಮೀಸೆಗಾರ, ಸದಾ ಕರ್ತವ್ಯ, ಕೇಸು ಅಂತಾನೆ ಇರ್ತಾರೆ.‌ ಆದ್ರೆ ಆ ಖಾಕಿಯೊಳಗೆ ಅದೆಷ್ಟೋ ಕವಿಗಳು, ನಟರು, ಹಾಡುಗಾರರು, ಸೇರಿದಂತೆ ಹಲವು ಪ್ರತಿಭೆಗಳನ್ನ ಹೊಂದಿದ್ದಾರೆ. ಅದೇಷ್ಟೋ ಪ್ರತಿಭೆಗಳು ಖಾಕಿಯೊಳಗೆ ಹುದುಗಿಹೋಗಿದ್ರೆ ಒಂದಷ್ಟು ಪ್ರತಿಭೆಗಳು ಪರಿಚತವಾಗಿವೆ.

ಅಂತಹದ್ದೆ ಒಬ್ಬ ಖಾಕಿಯೊಳಗಿನ ಕವಿ ಇಂದು ತಮ್ಮ 17ನೇ ಕವನ ಸಂಕಲನವನ್ನ ಬಿಡುಗಡೆ ಮಾಡಿದ್ದಾರೆ. ಹಾಡು ಹಕ್ಕಿಯ ಜಾಡು ಹಿಡಿದು ಎಂಬ ತಮ್ಮ ಕವನ ಸಂಕಲವನ್ನ ಇನ್ಸ್‌ಪೆಕ್ಟರ್ ಅನಿಲ್ ಕುಮಾರ್ ಪಿ ಗ್ರಾಮಪುರೋಹಿತ್ ಬಿಡುಗಡೆ ಮಾಡಿದ್ದಾರೆ. ಸಂಚಾರ ನಿಯಂತ್ರಣ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಿತ್ತಿರೋ ಅನಿಲ್ ಕುಮಾರ್ ಈ ಹಿಂದೆಯೂ ಹಲವು ಕವನ ಸಂಕಲ ಬಿಡುಗಡೆ ಮಾಡಿದ್ರು. ಉತ್ತಮ ವಾಗ್ಮಿಯಾಗಿರೋ ಅನಿಲ್ ಕುಮಾರ್ ಕುವೆಂಪು ಸೇರಿದಂತೆ ಹಲವು ಕವಿಗಳ ಕವನಗಳನ್ನ ನಾಲಿಗೆ ತುದಿಯಲ್ಲೆ ಹಿಡಿದಿಟ್ಟುಕೊಂಡಿದ್ದಾರೆ. ಅನಿಲ್ ಕುಮಾರ್ ಹಾಡುಹಕ್ಕಿಯ ಜಾಡು ಹಿಡಿದು ಕವನ ಸಂಕಲನಕ್ಕೆ ರಾಜೀವ್ ಮಾಗಲ್ ಮುನ್ನುಡಿ ಬರೆದಿದ್ದು ಇಂದು ತಮ್ಮ ಕಚೇರಿಯಲ್ಲಿ ತಮ್ಮ ಅಧಿಕಾರಿ ಸಿಬ್ಬಂದಿ ಜೊತೆಗೆ ಕವನ ಸಂಕಲನ ಬಿಡುಗಡೆ ಮಾಡಿದ್ದಾರೆ.

Edited By : Nagaraj Tulugeri
PublicNext

PublicNext

13/12/2024 08:52 pm

Cinque Terre

8.2 K

Cinque Terre

0

ಸಂಬಂಧಿತ ಸುದ್ದಿ