ಬೆಂಗಳೂರು: ಪ್ರತಿಭಟನೆಯ ದಶಮಾನೋತ್ಸವ ಮಾಡಿ ಜನಾಕ್ರೋಶ ವ್ಯಕ್ತ ಪಡಿಸಿದ್ದಾರೆ. ಪಣತ್ತೂರು ಜನರದ್ದು ಮುಗಿಯದ ಪ್ರಾಬ್ಲಂ ಅಂತ ನಡು ರಸ್ತೆಯಲ್ಲಿ ಕೇಕ್ ಕಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದಲ್ಲ ಎರಡಲ್ಲ ಇದು 10 ವರ್ಷದ ಸಮಸ್ಯೆಯಾಗಿದ್ದು, ಗುಂಡಿ ಸಮಸ್ಯೆ, ರೋಡ್ ಸಮಸ್ಯೆ ಒಂದಾ ಎರಡಾ ಸಮಸ್ಯೆಗಳು ಸಾಗರವಾಗಿ ಹೋಗಿವೆ ಅಂತ ಬೇಸತ್ತ ನಾಗರಿಕರು ಅಸಮಾಧಾನ ಹೊರಹಾಕಿದ್ದಾರೆ.
ರಸ್ತೆಯ ಮಧ್ಯೆ ನಿಂತು ಗುಂಡಿ ರಸ್ತೆಯಲ್ಲಿ ಕೇಕ್ ಕಟ್ ಮಾಡಿ ದುರಸ್ತಿಗೊಳಿಸುವಂತೆ ಡಿಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಆಗ್ರಹಿಸಿದ್ದಾರೆ. ಬಿಬಿಎಂಪಿ ಅಧಿಕಾರಿಗಳೇ ಅಭಿವೃಧ್ಧಿ ಮಾಡಿ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
PublicNext
15/12/2024 02:36 pm