ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಹವಾಮಾನ ಬದಲಾವಣೆ ಆಗ್ತಿರೋದ್ರಿಂದ ವೈರಾಣು, ಬ್ಯಾಕ್ಟೀರಿಯಾ ಹೆಚ್ಚಾಗ್ತಿವೆ ಎಚ್ಚರ - ದಿನೇಶ್ ಗುಂಡೂರಾವ್

ಬೆಂಗಳೂರು : ರಾಜಧಾನಿ ಬೆಂಗಳೂರಲ್ಲಿ ಮಳೆ ಜೊತೆ ಚಳಿ ಹೆಚ್ಚಾಗುತ್ತಿದೆ. ಕಳದೊಂದುವಾರದಿಂದ ಮಳೆ ಬಂದು ಹೋಗಿ ಮಾಡುತ್ತಿರೋದ್ರಿಂದ ಸಾಕಷ್ಟು ಜನರಲ್ಲಿ ಆರೋಗ್ಯ ಸಮಸ್ಯೆ ಎದುರಾಗುತ್ತಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಬೆಂಗಳೂರಲ್ಲಿ ಹವಾಮಾನ ಬದಲಾವಣೆ ಆಗ್ತಿರೋದ್ರಿಂದ ವೈರಾಣು, ಬ್ಯಾಕ್ಟೀರಿಯಾ ಹೆಚ್ಚಾಗಿವೆ, ಇದ್ರಿಂದ ಎಚ್ಚರವಾಗಿರಬೇಕು ಇದರ ಮೇಲೆ ಹೆಚ್ಚು ಗಮನ ಹರಿಸಬೇಕು ನಮ್ಮ ಹುಷಾರಲ್ಲಿ ನಾವು ಇರಬೇಕು ಎಂದರು.

ಅಲ್ದೇ ನೀರು ಬಳಕೆ, ಅದರ ಗುಣಮಟ್ಟ, ಆಹಾರದ ಗುಣಮಟ್ಟ ನೋಡಿಕೊಳ್ಳಬೇಕು ಜನ ಇರೋ ಕಡೆ ಕಡಿಮೆ ಓಡಾಡಬೇಕು, ಯಾರಿಗಾದರೂ ಕಫಾ‌, ಜ್ವರ ಇದ್ದರೆ ಬೇಗ ಹರಡುತ್ತದೆ ಆದಷ್ಟು ಮಟ್ಟಿಗೆ ಜನ ಇರೋ ಕಡೆ ಕಡಿಮೆ ಓಡಾಡಬೇಕು ಎಂದು ಜನತೆಗೆ ಸಲಹೆ ನೀಡಿದರು.

Edited By : Abhishek Kamoji
PublicNext

PublicNext

14/12/2024 03:29 pm

Cinque Terre

3.75 K

Cinque Terre

0

ಸಂಬಂಧಿತ ಸುದ್ದಿ