ಬೆಂಗಳೂರು: ವಾಲ್ಮೀಕಿ ಮತ್ತು ಮುಡಾ ಹಗರಣಗಳು ಕಾಂಗ್ರೆಸ್ ಕೊರಳಿಗೆ ಸುತ್ತಿಕೊಂಡ ಕಾರಣ ಕಾಂಗ್ರೆಸ್ ನಾಯಕರು ಕೋವಿಡ್ ಸಮಯದಲ್ಲಿ ಹಗರಣವಾಗಿದೆ ಎಂದು ಹಾಸ್ಯಾಸ್ಪದ ಆಪಾದನೆ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವಾಲ್ಮೀಕಿ ನಿಗಮದ 180 ಕೋಟಿ ಹಗರಣ ನಡೆದಿದೆ. ಅದರ ಬಗ್ಗೆ ಬಿಜೆಪಿ ಹೋರಾಟ ಮಾಡಿದ್ವಿ, ಇದರಿಂದ ಸಚಿವರು ರಾಜೀನಾಮೆ ಕೊಡಬೇಕಾಯ್ತು. ಬಳಿಕ ಮುಡಾ ಹಗರಣದ ವಿರುದ್ಧ ಹೋರಾಟ ಮಾಡಿ, ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲಾಯ್ತು. ಇವೆರಡೂ ಅವರ ಕೊರಳಿಗೆ ಸುತ್ತಿಕೊಂಡಿದ್ದರಿಂದ ಈಗ ನಾಲ್ಕು ವರ್ಷಗಳ ಹಿಂದಿನದ್ದು ಅಂದ್ರೆ ಕೋವಿಡ್ ಸಂದರ್ಭದಲ್ಲಿ ಹಗರಣ ನಡೆದಿದೆ ಎಂದು ಆರೋಪ ಮಾಡ್ತಿದ್ದಾರೆ. ಇಷ್ಟು ವರ್ಷ ಕಾಂಗ್ರೆಸ್ ನವರು ಏನು ಮಾಡ್ತಿದ್ರು?
ಕೋವಿಡ್ ಸಂದರ್ಭದಲ್ಲಿ ಪ್ರತೀ ಕ್ಷಣ, ಪ್ರತೀ ಗಂಟೆ ಮುಖ್ಯವಾಗಿತ್ತು. ಹಾಗಾಗಿ ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೆವು. ನಾವು ಪ್ರತೀ ದಿನ ಗಂಟೆಗಟ್ಟಲೆ ಹೊರಗೆ ಕೆಲಸ ಮಾಡಿದೆವು. ಆದ್ರೆ, ಸಿದ್ದರಾಮಯ್ಯ ಆಗ ಹೊರಗೆ ಬರಲಿಲ್ಲ. ಈಗ ಯಡಿಯೂರಪ್ಪ ಅವರ ಮೇಲೆ ಕೋವಿಡ್, ಪೋಕ್ಸೋ ಕೇಸ್ ಹಾಕ್ತಿದ್ದಾರೆ. ಕಾಂಗ್ರೆಸ್ ವಿರುದ್ಧದ ಕೇಸ್‌ಗೆ ಸಮಾನವಾಗಿ ಇರಬೇಕು ಅಂತ ಕೇಸ್ ಹಾಕಿದ್ದಾರೆ. ಇದು ದ್ವೇಷದ ರಾಜಕಾರಣ ಎಂದು ಆರ್. ಅಶೋಕ್ ಕಿಡಿ ಕಾರಿದರು.
PublicNext
15/12/2024 08:45 am