ಬೆಂಗೂರು: ಬೆಂಗಳೂರಿನಲ್ಲಿ ಸದ್ಯ ರಸ್ತೆ ಗುಂಡಿಗಳದ್ದೇ ಕಾರುಬಾರು. ಎಡೆಬಿಡದೇ ಸುರಿಯುತ್ತಿರುವ ಮಳೆಗೆ ಮತ್ತಷ್ಟು ಗುಂಡಿಗಳು ಸೃಷ್ಟಿಯಾಗಿ ಜನ ಬಿದ್ದು ಗಾಯಗಳಾಗಿ, ಕೆಲವರು ಪ್ರಾಣವನ್ನೂ ಕಳೆದುಕೊಳ್ಳುತ್ತಿದ್ದಾರೆ.
ಭಾರೀ ಮಳೆಗೆ ಕನಕಪುರ ರಸ್ತೆಯ ಕಗ್ಗಲಿಪುರ ಠಾಣೆ ವ್ಯಾಪ್ತಿಯ ಖಾಸಗೀ ಶಾಲೆಯ ಮುಂಭಾಗ ದೊಡ್ಡ ಗುಂಡಿ ಬಿದ್ದಿದೆ. ಇದ್ರಿಂದ ರಸ್ತೆ ಪೂರ್ತಿ ಜಾಮ್ ಆಗಿದ್ದು, 2-3 ಕಿಮೀವರೆಗೆ ವಾಹನಗಳು ನಿಂತಲ್ಲೇ ನಿಂತಿದ್ವು. ಇದನ್ನ ಗಮನಿಸಿದ ಕಗ್ಗಲಿಪುರ ಠಾಣೆ ಪೋಲಿಸರಾದ ರಾಮಪ್ಪ ಗುತ್ತೇದಾರ್ ನೇತೃತ್ವದಲ್ಲಿ ಸಿಬ್ಬಂದಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಮಾಡಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಂಜಿತಾಸುನಿಲ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
28/08/2022 08:04 am