", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/286525-1738762636-WhatsApp-Image-2025-02-05-at-7.07.07-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SureshChallakere" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿತ್ರದುರ್ಗ: ಗಂಡನ ಮೇಲಿನ ಕೋಪಕ್ಕೆ 7 ವರ್ಷದ ತನ್ನದೇ ಮಗನ ಕೈ ಕಾಲಿಗೆ ತಾಯಿಯೇ ಬರೆ ಎಳೆದು ವಿಕೃತಿ ಮೆರೆದ ಘಟನೆ ಚಿತ್ರದುರ್ಗ ಕವಾಡಿಗರಹಟ್ಟ...Read more" } ", "keywords": "Child Abuse, Mother Arrested, Domestic Violence, Child Endangerment, Parental Neglect, Crime Against Children, Women and Crime, Family Violence, Child Welfare, Indian Law and Order, Child Protection Services, Mental Health Awareness,Chitradurga,Crime", "url": "https://publicnext.com/node" }
ಚಿತ್ರದುರ್ಗ: ಗಂಡನ ಮೇಲಿನ ಕೋಪಕ್ಕೆ 7 ವರ್ಷದ ತನ್ನದೇ ಮಗನ ಕೈ ಕಾಲಿಗೆ ತಾಯಿಯೇ ಬರೆ ಎಳೆದು ವಿಕೃತಿ ಮೆರೆದ ಘಟನೆ ಚಿತ್ರದುರ್ಗ ಕವಾಡಿಗರಹಟ್ಟಿ ಆಶ್ರಯ ಬಡವಾಣೆಯಲ್ಲಿ ನಡೆದಿದೆ!
ಕವಾಡಿಗರಹಟ್ಟಿ ಆಶ್ರಯ ಬಡಾವಣೆಯ ಅನಿಲ್ ಹಾಗೂ ಉಮ್ಮೇಸಲ್ಮಾ ದಂಪತಿ 10 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ದಂಪತಿ ಕಳೆದ 2 ವರ್ಷಗಳ ಹಿಂದೆ ತಲಾಖ್ ಪಡೆದಿದ್ದರು.
ಅಜ್ಜಿ ಮನೆಗೆ ಹೋಗದಂತೆ, ತಂದೆ ಜೊತೆ ಮಾತನಾಡದಂತೆ ಬಾಲಕನ ತಾಯಿ ಸರಿಯಾಗಿ ಊಟ ಕೊಡದೆ ಮನೆಯಲ್ಲಿಯೇ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೆ ಬಾಲಕನ ಕೈ, ಕಾಲಿನ ಮೇಲೆ ಬರೆ ಎಳೆದಿದ್ದಾಳೆ! ಬಾಲಕ ನರಳಾಟ, ಚೀರಾಟ ಕಂಡು ಬಾಲಕನ ಅಜ್ಜಿ ಶಮಶಾದ್ ಮೊಮ್ಮಗನಿಗೆ ನ್ಯಾಯ ಕೊಡಿಸಿ ಅಂತಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ಅಜ್ಜಿ ಶಮಶಾದ್ ಗೆ ಕರವೇ ಕಾರ್ಯಕರ್ತರು ಬೆಂಬಲವಾಗಿ ನಿಂತಿದ್ದಾರೆ.
ತನ್ನ ಮೊಮ್ಮಗನಿಗೆ ಆದ ಅನ್ಯಾಯದಿಂದ ಅಜ್ಜಿ ಶಮಶಾದ್ ಸೊಸೆ ವಿರುದ್ಧ ಕೋಟೆ ಠಾಣೆಯಲ್ಲಿ ಪ್ರಕರಣವನ್ನು ಸಹ ದಾಖಲಿಸಿದ್ದಾರೆ. ನಿನಗೆ ಸಾಕಲು ಆಗದಿದ್ದರೆ ನನಗೆ ಕೊಡು ಎಂದು ಬಾಲಕನ ಅಜ್ಜಿ ಮಾಧ್ಯಮದ ಮುಂದೆ ಸೊಸೆಗೆ ಅಂಗಲಾಚಿ ಬೇಡಿಕೊಂಡಿದ್ದಾರೆ. ಹೆತ್ತ ಅಮ್ಮನಿಂದಲೇ ಹಿಂಸೆಗೊಳಗಾದ ಬಾಲಕನಿಗೆ ಮಕ್ಕಳ ರಕ್ಷಣಾ ಘಟಕದಲ್ಲಿ ಕೌನ್ಸೆಲಿಂಗ್ ನಡೆಸಲಾಗಿದೆ.
PublicNext
05/02/2025 07:07 pm