", "articleSection": "Crime,Law and Order,News,Public News,LadiesCorner", "image": { "@type": "ImageObject", "url": "https://prod.cdn.publicnext.com/s3fs-public/421698-1738761869-A8~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ArujunChitradruga" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿತ್ರದುರ್ಗ: ವಿಚ್ಛೇದಿತ ಮಹಿಳೆ ವಿರುದ್ಧ ಗ್ರಾಮ ಪಂಚಾಯತಿ ಸದಸ್ಯ ಹನಿಟ್ರ್ಯಾಪ್ ಆರೋಪ ಮಾಡಿದ್ದ ಬೆನ್ನಲ್ಲೇ ಆರೋಪಕ್ಕೀಡಾಗಿರುವ ಸೌಮ್ಯ ಪ್ರತಿಕ್...Read more" } ", "keywords": "Honey trap, Honeytrap scandal, Honey trap cases, Honey trap victims, Honey trap investigation, Honey trap news, Honey trap updates, Honey trap politics, Honey trap blackmail, Honey trap extortion, Honey trap crime, Honey trap police investigation.,Chitradurga,Crime,Law-and-Order,News,Public-News,LadiesCorner", "url": "https://publicnext.com/node" }
ಚಿತ್ರದುರ್ಗ: ವಿಚ್ಛೇದಿತ ಮಹಿಳೆ ವಿರುದ್ಧ ಗ್ರಾಮ ಪಂಚಾಯತಿ ಸದಸ್ಯ ಹನಿಟ್ರ್ಯಾಪ್ ಆರೋಪ ಮಾಡಿದ್ದ ಬೆನ್ನಲ್ಲೇ ಆರೋಪಕ್ಕೀಡಾಗಿರುವ ಸೌಮ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಚಿತ್ರದುರ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹನಿಟ್ರ್ಯಾಪ್ ಆರೋಪ ಸುಳ್ಳು. ಇಷ್ಟವಿಲ್ಲದಿದ್ದರೂ ನನಗೆ ನನ್ನ ಸೋದರಮಾವನೊಂದಿಗೆ ವಿವಾಹವಾಗಿತ್ತು. ಹಾಗಾಗಿ ಮಂಜುನಾಥನ ಜೊತೆ ಸ್ನೇಹವಾಗಿ, ದುರ್ಗದಲ್ಲಿಮನೆ ಮಾಡಿಕೊಂಡಿದ್ದೆ. ಮಂಜುನಾಥ ನನಗೆ ತಾಳಿ ಕಟ್ಟದೇ 8 ವರ್ಷದಿಂದ ನನ್ನನ್ನು ಬಳಕೆ ಮಾಡಿಕೊಂಡ. ನನ್ನ ಹತ್ತಿರ ಇರೋ ದುಡ್ಡು, ಬಂಗಾರ ತಗೊಂಡು ಹೋಗಿದ್ದಾನೆ ಎಂದು ಆರೋಪಿಸಿದ್ದಾರೆ.
ಅವನೇ ಆಗಾಗ ನಮ್ಮ ಮನೆಗೆ ಬಂದು ಹೋಗುತ್ತಿದ್ದ. ಕುಡಿದ ಅಮಲಲ್ಲಿ ನನ್ನನ್ನು ಸಿಗರೇಟಿನಿಂದ ಸುಟ್ಟಿದ್ದಾನೆ. ನಾನು ಫೋನಿನಲ್ಲಿ ಮಾತನಾಡಿದ್ರೆ ಸಂಶಯ ಪಡ್ತಿದ್ದ. ಅವನು ಕೇಳಿದ್ದನ್ನು ಕೊಡದಿದ್ರೆ ಈ ರೀತಿ ಅಪವಾದ ಮಾಡ್ತಿದ್ದ. ಮಂಜುನಾಥನಿಗೆ ದುಡ್ಡು ಕೊಡಬೇಡ ಅಂತ ಅವನ ಹೆಂಡ್ತಿನೇ ಬಂದು ಹೇಳಿದ್ದಾಳೆ. ನನಗೆ, ಮಂಜುನಾಥ ಕೊಲ್ತೀನಿ ಅಂತಾ ಧಮ್ಕಿ ಹಾಕ್ತಿದ್ದ ಎಂದು ಸೌಮ್ಯ ಆರೋಪಿಸಿದ್ದಾರೆ.
PublicNext
05/02/2025 06:55 pm