ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಸಿಗೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದಾರೆ ಶಿವಣ್ಣ : ಮಾರ್ಚ್‌ನಿಂದ ಸಿನಿಮಾ ಕೆಲಸದಲ್ಲಿ ಭಾಗಿ

ಕ್ಯಾನ್ಸರ್ ಮುಕ್ತ ಆಗಿರುವ ನಟ ಶಿವರಾಜ್​ಕುಮಾರ್ ಸದ್ಯ ಬೆಂಗಳೂರು ಬಿಟ್ಟು ಶಿರಸಿಗೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಮಾರ್ಚ್​​ನಿಂದ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ಇತ್ತೀಚೆಗೆ ಶಿವಣ್ಣ ಯಾಣಕ್ಕೆ ತೆರಳಿದ್ದರು. 'ನಮ್ಮೂರ ಮಂದಾರ ಹೂವೆ' ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಶಿವಣ್ಣ ಯಾಣಕ್ಕೆ ಬಂದಿದ್ರು. ಇದಾದ 29 ವರ್ಷಗಳ ಬಳಿಕ ಅವರು ಮತ್ತೆ ಈ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ಫೋಟೋಗಳನ್ನು ಅವರು ಹಂಚಿಕೊಂಡಿದ್ದರು. ಈಗ ಶಿವರಾಜ್​ಕುಮಾರ್ ತಮ್ಮ ಸಂಬಂಧಿ, ಶಾಸಕ ಭೀಮಣ್ಣ ಒಡೆತನದಲ್ಲಿ ಇರುವ ಶಿರಸಿಯ ಹೋಟೆಲ್​ನಲ್ಲಿ ಉಳಿದುಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಇದ್ದರೆ ಒಬ್ಬರಾದ ಬಳಿಕ ಒಬ್ಬರು ಅವರ ಮನೆಗೆ ಭೇಟಿ ನೀಡುತ್ತಾ ಇರುತ್ತಾರೆ. ಹೀಗಾಗಿ, ವಿಶ್ರಾಂತಿ ಪಡೆಯಲು ಆಗೋದಿಲ್ಲ. ಈ ಕಾರಣಕ್ಕೆ ಅವರು ಶಿರಸಿಗೆ ಶಿಫ್ಟ್ ಆಗಿದ್ದಾರೆ. ಇಲ್ಲಿ ಅವರು ಗೀತಾ ಜೊತೆ ಉಳಿದುಕೊಂಡಿದ್ದಾರೆ. ಅವರು ಭೇಟಿ ಮಾಡಲು ಯಾರಿಗೂ ಅವಕಾಶ ಇಲ್ಲ. ಶಿವರಾಜ್​ಕುಮಾರ್ ಅವರು ಸಿನಿಮಾ ಕೆಲಸ ಆರಂಭಿಸೋದು ಯಾವಾಗ ಎಂಬುದನ್ನು 'ಬಿ. ಗಣಪತಿ' ಅವರ ಯೂಟ್ಯೂಬ್​ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಮಾರ್ಚ್ ತಿಂಗಳಿಂದ ಸಿನಿಮಾ ಕೆಲಸ ಆರಂಭಿಸುತ್ತೇನೆ. ರಾಮ್ ಚರಣ್ ಜೊತೆ ಸಿನಿಮಾ ಮಾಡುತ್ತಿದ್ದೇನೆ. ತಮಿಳಿನ ನಿರ್ದೇಶಕನೋರ್ವ ಚಿತ್ರ ಮಾಡುತ್ತಿದ್ದು ಅವರ ಜೊತೆ ಮಾಡುತ್ತಿದ್ದೇನೆ. ಸದ್ಯ ಇದೆರಡು ಸಿನಿಮಾಗಳು ಇವೆ' ಎಂದು ಅವರು ಹೇಳಿದ್ದಾರೆ.

ಅರ್ಜುನ್ ಜನ್ಯ ನಿರ್ದೇಶನದ '45' ಚಿತ್ರದ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಶಿವಣ್ಣ, ಉಪೇಂದ್ರ ಹಾಗೂ ರಾಜ್​ ಬಿ. ಶೆಟ್ಟಿ ನಟಿಸಿದ್ದಾರೆ. ಈ ಚಿತ್ರವ ಈ ವರ್ಷ ತೆರೆಗೆ ಬರಲಿದೆ. ಇದರ ಪ್ರಚಾರದಲ್ಲಿ ಶಿವಣ್ಣ ಭಾಗಿ ಆಗಲಿದ್ದಾರೆ.

Edited By : Nirmala Aralikatti
PublicNext

PublicNext

05/02/2025 12:25 pm

Cinque Terre

39.48 K

Cinque Terre

1