", "articleSection": "Law and Order,Cinema", "image": { "@type": "ImageObject", "url": "https://prod.cdn.publicnext.com/s3fs-public/52563-1738594410-f5a57cf6-8af3-4c62-b159-b58a1ce8f180.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನವದೆಹಲಿ : ತನ್ನ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರುವಂತೆ ಕೋರಿ ಇಂದು (ಸೋಮವಾರ) ಮತ್ತೊಮ್ಮೆ ನಟ ಅ...Read more" } ", "keywords": "Aaradhya Bachchan moves Delhi High Court,,Law-and-Order,Cinema", "url": "https://publicnext.com/node" } ದೆಹಲಿ ಹೈಕೋರ್ಟ್ ಮೊರೆಹೋದ ಆರಾಧ್ಯ ಬಚ್ಚನ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೆಹಲಿ ಹೈಕೋರ್ಟ್ ಮೊರೆಹೋದ ಆರಾಧ್ಯ ಬಚ್ಚನ್

ನವದೆಹಲಿ : ತನ್ನ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರುವಂತೆ ಕೋರಿ ಇಂದು (ಸೋಮವಾರ) ಮತ್ತೊಮ್ಮೆ ನಟ ಅಭಿಷೇಕ್​ ಬಚ್ಚನ್​ - ನಟಿ ಐಶ್ವರ್ಯಾ ದಂಪತಿಯ ಪುತ್ರಿ ಆರಾಧ್ಯ ಬಚ್ಚನ್‌ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌ ಗೂಗಲ್​ಗೆ ನೋಟಿಸ್​ ಜಾರಿ ಮಾಡಿದೆ. ಪ್ರತಿಯೊಬ್ಬ ವ್ಯಕ್ತಿಯು ಸೆಲೆಬ್ರಿಟಿಯಾಗಿದ್ದರೂ, ವಿಶೇಷವಾಗಿ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ವಿಷಯದಲ್ಲಿ ಘನತೆಯ ಹಕ್ಕಿದೆ ಎಂದು ನ್ಯಾಯಾಲಯ ಹೇಳಿದೆ.

ಕೆಲವು ವೆಬ್‌ಸೈಟ್‌ಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳು ಹೈಕೋರ್ಟ್ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ಆರಾಧ್ಯ ಬಚ್ಚನ್ ಎರಡನೇ ಅರ್ಜಿಯನ್ನು ಸಲ್ಲಿಸಿದ್ದಾರೆ.

ತನ್ನ ಹಿಂದಿನ ಆರ್ಜಿಯಲ್ಲಿ ಆರಾಧ್ಯ ಗುರುತಿಸಿರುವ ವಿಷಯಗಳನ್ನು ತೆಗೆದು ಹಾಕುವಂತೆ ಗೂಗಲ್​ನ ಸರ್ಚ್​ ಎಂಜಿನ್​ ಮತ್ತು ಬಾಲಿವುಡ್​ ಟೈಮ್ಸ್​ ಮತ್ತು ಇತರೆ ವೈಬ್​ಸೈಟ್​ಗಳಿಗೆ ನಿರ್ದೇಶಿಸಿದ (ಏಪ್ರಿಲ್ 23,2023) ಹಿಂದಿನ ದೆಹಲಿ ಹೈಕೋರ್ಟ್​ ಆದೇಶನುಸಾರ ಮತ್ತೆ ಹೊಸ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.

Edited By : Nirmala Aralikatti
PublicNext

PublicNext

03/02/2025 08:23 pm

Cinque Terre

33.92 K

Cinque Terre

0