", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/222042-1738565468-Add-a-heading---2025-02-03T122005.108.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಸಂಘರ್ಷ ದಿನೆ ದಿನೆ ಹೆಚ್ಚಾಗುತ್ತಲೇ ಇದೆ. ಇದೀಗ ರಾಜ್ಯ ಬಿಜೆಪಿಯ ಕಿತ್ತಾಟ ದೆಹಲಿ ಅಂಗಳಕ್ಕೆ ಶಿಫ್ಟ್ ಆಗುತ್...Read more" } ", "keywords": "BJP rebels team, Delhi visit, BJP high command, meeting, discussion, Indian politics, BJP news, Delhi politics, political developments, BJP leadership. ,,Politics", "url": "https://publicnext.com/node" }
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಸಂಘರ್ಷ ದಿನೆ ದಿನೆ ಹೆಚ್ಚಾಗುತ್ತಲೇ ಇದೆ. ಇದೀಗ ರಾಜ್ಯ ಬಿಜೆಪಿಯ ಕಿತ್ತಾಟ ದೆಹಲಿ ಅಂಗಳಕ್ಕೆ ಶಿಫ್ಟ್ ಆಗುತ್ತಿದೆ.
ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನೇತೃತ್ವದ ಬಿಜೆಪಿ ರೆಬಲ್ಸ್ ಟೀಂ ಇಂದು ದೆಹಲಿಗೆ ತೆರಳಿದೆ. ದೆಹಲಿಯಲ್ಲಿ ಕೆಲ ತಟಸ್ಥ ಗುಂಪಿನ ಸಂಸದರ ಜೊತೆ ಚರ್ಚೆ ನಡೆಸಿ ಹೈಕಮಾಂಡ್ ನಾಯಕರನ್ನ ಭೇಟಿಯಾಗಲಿದ್ದಾರೆ ರೆಬಲ್ಸ್ ಟೀಂ. ಇತ್ತೀಚೆಗೆ ಜಿಲ್ಲಾಧ್ಯಕ್ಷರ ನೇಮಕದಲ್ಲಿ ಕೇವಲ ರೆಬಲ್ಸ್ ಟೀಂ ಅಷ್ಟೇ ಅಲ್ಲದೆ ತಟಸ್ಥ ಗುಂಪಿಗೂ ಸಹ ಅಸಮಾಧಾನಗೊಂಡ ಹಿನ್ನೆಲೆಯಲ್ಲಿ ಅವರ ಜೊತೆ ಚರ್ಚೆ ನಡೆಸಿ ವರಿಷ್ಠರ ಭೇಟಿಗೆ ಸಮಯ ಕೇಳಿದ್ದಾರೆ ಎನ್ನಲಾಗಿದೆ.
ಪ್ರಮುಖವಾಗಿ ರಾಜ್ಯಾಧ್ಯಕ್ಷರ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಈಗಾಗಲೇ ಒಂದು ಸುತ್ತಿನ ಚರ್ಚೆ ನಡೆಸಿರುವ ರೆಬಲ್ಸ್ ಟೀಂ ಇನ್ನೂಂದು ಸುತ್ತಿನ ಸಭೆ ಬಳಿಕ ದೆಹಲಿಯಲ್ಲೇ ನಮ್ಮ ಬಣ ದಿಂದ ಯಾರು ಸ್ಪರ್ಧೆ ಮಾಡ್ತಾರೆ ಎಂದು ಘೋಷಣೆ ಮಾಡ್ತೀವಿ ಎಂದು ಕಳೆದ ವಾರ ಯತ್ನಾಳ್ ಹೇಳಿದರು. ಇದೀಗ ಇಂದು ರೆಬಲ್ಸ್ ಟೀಂ ದೆಹಲಿಗೆ ತೆರಳುತ್ತಿರೋದು ಸಾಕಷ್ಟು ಕುತೂಹಲ ಮೂಡಿಸಿದೆ. ಹಾಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಸ್ಪರ್ಧೆ ಮಾಡಲು ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಡಲಿದ್ಯಾ? ಒಂದು ವೇಳೆ ಕೊಟ್ಟರು ವಿಜಯೇಂದ್ರ ವಿರುದ್ಧ ಸ್ಪರ್ಧೆ ಮಾಡೋದು ರೆಬಲ್ಸ್ ಟೀಂ ನಿಂದನಾ ಅಥವಾ ತಟಸ್ಥ ಗುಂಪುನಿಂದನಾ ಅನ್ನೋದು ಬಿಜೆಪಿ ವಲಯದಲ್ಲೇ ಚರ್ಚೆಯಾಗುತ್ತಿದೆ. ಇದೇ ಫೆಬ್ರವರಿ ಎರಡನೇ ವಾರದಲ್ಲಿ ರಾಜ್ಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಚುನಾವಣೆ ಸಂಬಂಧ ಶಿವರಾಜ್ ಸಿಂಗ್ ಚೌಹೌಣ್ ಬರ್ತಿದ್ದಾರೆ. ಅದಕ್ಕೂ ಮುನ್ನ ದೆಹಲಿಯಲ್ಲಿ ರೆಬಲ್ಸ್ ಟೀಂ ತೆರಳಿ ಅಲ್ಲಿ ಸಭೆ ನಡೆಸೋದು ಸಾಕಷ್ಟು ಕುತೂಹಲ ಮೂಡಿಸಿದೆ.
PublicNext
03/02/2025 12:22 pm