", "articleSection": "Religion", "image": { "@type": "ImageObject", "url": "https://prod.cdn.publicnext.com/s3fs-public/222042-1738574059-Add-a-heading---2025-02-03T132817.459.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಲಕ್ನೋ: ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ 144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭಮೇಳವು ಜನವರಿ 13ರಿಂದ ಆರಂಭವಾಗಿದ್ದು, ಫೆಬ್ರುವರಿ 26ರ...Read more" } ", "keywords": "Naga Sadhu, Kumbh Mela, spiritual experience, meditation, yoga, Hinduism, spirituality, Indian culture, Kumbh Mela experience, Naga Sadhu dhyan. ,,Religion", "url": "https://publicnext.com/node" }
ಲಕ್ನೋ: ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ 144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭಮೇಳವು ಜನವರಿ 13ರಿಂದ ಆರಂಭವಾಗಿದ್ದು, ಫೆಬ್ರುವರಿ 26ರ ವರೆಗೂ ನಡೆಯಲಿದೆ. ದೇಶ, ವಿದೇಶಗಳಿಂದಲೂ ಕೋಟ್ಯಂತರ ಜನರು ಆಗಮಿಸುತ್ತಿದ್ದಾರೆ. ವಿಶ್ವವಿಖ್ಯಾತ ಕುಂಭಮೇಳದಲ್ಲಿ ಭಾಗಿಯಾದ ಪಬ್ಲಿಕ್ ನೆಕ್ಸ್ಟ್ ಓದುಗರಾದ ಮಧು ಎಂಬುವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಅವರು ಪಬ್ಲಿಕ್ ನೆಕ್ಸ್ಟ್‌ಗೆ ಹಂಚಿಕೊಂಡ ಬರಹ ಇಲ್ಲಿದೆ ನೋಡಿ....
ನನ್ನ ಹೆಸರು ಮಧು, ಪಬ್ಲಿಕ್ ನೆಕ್ಸ್ಟ್ ನ ಓದುಗರು. ಕಳೆದ ವಾರ 27ರಿಂದ 30ನೇ ದಿನಾಂಕದವರೆಗೆ ಪ್ರಯಾಗ್ ರಾಜ್‌ನ ಆಶ್ರಮ ಒಂದರಲ್ಲಿ ತಂಗಿದ್ದು, ಕುಂಭಮೇಳದ ಬಗ್ಗೆ ನನ್ನ ಕೆಲವು ಅನಿಸಿಕೆಗಳು.
ನಾಲ್ಕು ದಿನಗಳ ಕಾಲ ಕುಂಭಮೇಳದಲ್ಲಿದ್ದು ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನವನ್ನು ಮುಗಿಸಿ ಸಾಕಷ್ಟು ಸಾಧು ಸಂತರನ್ನು ಮಾತನಾಡಿಸಿ ಅವರ ಆಶೀರ್ವಾದವನ್ನು ಪಡೆದುಕೊಂಡಿದ್ದೇನೆ. ಜನವರಿ 29ರಂದು ಅಮಾವಾಸ್ಯೆಯ ಪುಣ್ಯ ಸ್ನಾನ ನನ್ನ ಜೀವನದಲ್ಲಿ ಎಂದು ಮರೆಯಲಾಗದ ದಿನ. ನಿಜಕ್ಕೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಶಿರಸಾಷ್ಟಾಂಗ ನಮಸ್ಕಾರವನ್ನು ಮಾಡಲು ಬಯಸುತ್ತೇನೆ. ಏಕೆಂದರೆ ಅವರು ಸರಿಸುಮಾರು 10ರಿಂದ 15 ಸಾವಿರ ಎಕರೆ ಭೂಮಿಯಲ್ಲಿ ಎಂತಹ ಅದ್ಭುತವಾದಂತಹ ವ್ಯವಸ್ಥೆಯನ್ನು ಕಲ್ಪಿಸಿ ಕೊಟ್ಟಿದ್ದಾರೆ. ನಾಗಸಾಧುಗಳು ಓಡಾಡಲು, ವೈದ್ಯಕೀಯ ವ್ಯವಸ್ಥೆಗಾಗಿ ವಿಶೇಷ ದಾರಿ ಹಾಗೂ ಜನಸಾಮಾನ್ಯರಿಗೆ ಅಮೃತ ಸ್ನಾನವನ್ನು ಮಾಡಲು ಒಂದು ದಾರಿಯನ್ನು ಮಾಡಿಕೊಟ್ಟಿದ್ದು, ಎಲ್ಲರಿಗೂ ಕೂಡ ಈ ಅವಕಾಶ ಸಿಗಲಿ ಎಂದು ಅತ್ಯಂತ ಅಚ್ಚುಕಟ್ಟಾಗಿ ವ್ಯವಸ್ಥೆಯನ್ನು ಮಾಡಿದ್ದಾರೆ. ಹೀಗಿದ್ದರೂ ಕೂಡ ಅವಘಡ ಸಂಭವಿಸಿದ್ದು ಮನಸ್ಸಿಗೆ ಹೆಚ್ಚು ನೋವನ್ನು ಉಂಟು ಮಾಡಿತು.
ಈ ಚಿತ್ರದಲ್ಲಿ ಕಾಣಿಸುತ್ತಿರುವ ನಾಗಸಾಧು ಮೂಲತಃ ಮಹಾರಾಷ್ಟ್ರದವರಾಗಿದ್ದು, ವ್ಯಾಪಾರಿ ಆಗಿದ್ದಾರೆ. ಸತತವಾಗಿ 25 ವರ್ಷಗಳಿಂದ ಸಾಧನೆಯನ್ನು ಮಾಡುತ್ತಿದ್ದು ಒಂದು ವಿಶೇಷ ಶಕ್ತಿಯನ್ನು ಮೈಗೂಡಿಸಿಕೊಂಡಿದ್ದಾರೆ. ನಾನು ಇವರನ್ನು ಕಂಡ ಹಾಗೆ ಬೆಳಗ್ಗೆ 8 ಗಂಟೆಗೆ ಬಿಸಿಲಿನಲ್ಲಿ ಕುಳಿತುಕೊಂಡು ಧ್ಯಾನ ಮಗ್ನರಾಗಿದ್ದು ಅವರು ಧ್ಯಾನದಿಂದ ಹೊರ ಬಂದಾಗ ಮಧ್ಯಾಹ್ನ ಎರಡು ಗಂಟೆ 15 ನಿಮಿಷ. ಈ ಸಮಯದಲ್ಲಿ ಶರೀರವನ್ನು ಒಂದು ಚೂರು ಅಲುಗಾಡಿಸದೆ ಸುತ್ತಮುತ್ತ ಸಾಕಷ್ಟು ಶಬ್ದಗಳು ಬರುತ್ತಿದ್ದರೂ ಕೂಡ ಯಾವುದರ ಕಡೆಯೂ ಗಮನಕೊಡದೆ ಇದ್ದದ್ದು ನನಗೆ ಅತ್ಯಂತ ಆಶ್ಚರ್ಯವನ್ನು ಉಂಟು ಮಾಡಿತು. ಇವರ ಪ್ರಕಾರ ತ್ರಿವೇಣಿ ಸಂಗಮ ಎಂದರೆ ಹಣೆಯ ಮಧ್ಯಭಾಗದಲ್ಲಿ ಇರುವಂತಹ ಅಜ್ಞಾಚಕ್ರ, ತಲೆಯ ನೆತ್ತಿಯ ಮೇಲೆ ಇರುವಂತಹ ಸಹಸ್ರಾರ್ ಚಕ್ರ ಹಾಗೂ ನೆತ್ತಿಯಿಂದ ಸ್ವಲ್ಪ ಕೆಳಭಾಗದಲ್ಲಿ ಶಿಖಾ. ಈ ಮೂರು ಸಂಗಮ ಕ್ಷೇತ್ರದಲ್ಲಿ ಯಾವ ವ್ಯಕ್ತಿಯೂ ನಿಷ್ಠೆಯಿಂದ ಧ್ಯಾನಮಗ್ನನಾಗಿ ತನ್ನ ಗಮನವನ್ನು ಕೇಂದ್ರೀಕರಿಸುತ್ತಾನೋ ಅವನು ವಿಶೇಷ ಶಕ್ತಿಯಿಂದ ಕೂಡಿರುತ್ತಾನೆ. ಈ ವಿಶೇಷ ಶಕ್ತಿಯೊಂದಿಗೆ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನವನ್ನು ತೆಗೆದುಕೊಂಡು ಮತ್ತಷ್ಟು ಶಕ್ತಿವಂತನಾಗುತ್ತಾನೆ.
ಈ ಪುಣ್ಯ ಕ್ಷೇತ್ರದಲ್ಲಿ ಇಂತಹ ಹಲವಾರು ಸಾಧಕರನ್ನು ನಾವು ಭೇಟಿ ಮಾಡಬಹುದು. ಒಬ್ಬೊಬ್ಬರ ಸಾಧನೆಯೂ ಕೂಡ ರೋಮಾಂಚನಗೊಳಿಸುತ್ತದೆ. ಇದರ ಎಲ್ಲಾ ಅನುಭವವನ್ನು ಪಡೆಯಬೇಕಾದರೆ ನಾವು ಈ ಪುಣ್ಯ ಭೂಮಿಗೆ ಭೇಟಿ ಕೊಡಲೇಬೇಕು. ಸಾಧ್ಯವಾದರೆ ಫೆಬ್ರವರಿ 12ರಂದು ನಡೆಯುವ ಹುಣ್ಣಿಮೆಯ ಪುಣ್ಯ ಸ್ನಾನಕ್ಕೆ ಹೋಗಿಬನ್ನಿ. ಭಗವಂತ ಎಲ್ಲರಿಗೂ ಕೂಡ ಒಳ್ಳೆಯದು ಮಾಡಲಿ ಎಂದು ಮಧು ತಿಳಿಸಿಕೊಟ್ಟಿದ್ದಾರೆ.
PublicNext
03/02/2025 02:45 pm