", "articleSection": "Cinema,Religion,Viral", "image": { "@type": "ImageObject", "url": "https://prod.cdn.publicnext.com/s3fs-public/52563-1738496707-79e6793f-7c49-4c5b-9922-8a3b22113cb5.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಪ್ರಯಾಗ್‌ರಾಜ್ ಮಹಾಕುಂಭಮೇಳ ಅದ್ದೂರಿಯಾಗಿ ನಡೆಯುತ್ತಿದೆ. ದಿನದಿಂದ ದಿನಕ್ಕೆ ಭಕ್ತಸಾಗರ ಹರಿದು ಬರುತ್ತಿದೆ. ಮೌನಿ ಅಮಾವಾಸ್ಯೆಯ ಬಳಿಕವೂ ಕೋಟ್ಯ...Read more" } ", "keywords": "KGF, Yash, Srinidhi Shetty, Mahakumbh, Mela, Bollywood, Kannada cinema, Indian film, movie news, entertainment news, celebrity news, KGF 2, KGF chapter 2, Srinidhi Shetty news, Yash news, Mahakumbh ,,Cinema,Religion,Viral", "url": "https://publicnext.com/node" }
ಪ್ರಯಾಗ್‌ರಾಜ್ ಮಹಾಕುಂಭಮೇಳ ಅದ್ದೂರಿಯಾಗಿ ನಡೆಯುತ್ತಿದೆ. ದಿನದಿಂದ ದಿನಕ್ಕೆ ಭಕ್ತಸಾಗರ ಹರಿದು ಬರುತ್ತಿದೆ. ಮೌನಿ ಅಮಾವಾಸ್ಯೆಯ ಬಳಿಕವೂ ಕೋಟ್ಯಾಂತರ ಜನ ಪುಣ್ಯಸ್ನಾನ ಮಾಡಲು ಪ್ರಯಾಗ್‌ರಾಜ್‌ಗೆ ಪ್ರಯಾಣ ಬೆಳೆಸುತ್ತಿದ್ದಾರೆ.
ಇದೀಗ ಸ್ಯಾಂಡಲ್‌ವುಡ್ ಸ್ಟಾರ್ ನಟಿ, ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ ಕುಂಭಮೇಳದಲ್ಲಿ ಕಾಣಿಸಿಕೊಂಡಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು ಪುನೀತರಾಗಿದ್ದಾರೆ. ಜೊತೆಗೆ ಆ ದಿನದ ಒಂದಷ್ಟು ಅನುಭವಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ನಾನು ಕುಂಭಮೇಳಕ್ಕೆ ಬರ್ತಿನಿ ಅಂತ ಅಂದುಕೊಂಡಿರಲಿಲ್ಲ. ಇಲ್ಲಿಗೆ ಬಂದ್ಮೇಲೆ ವಿಶೇಷ ಅನುಭವ ಪಡೆಯುತ್ತೇನೆ ಅನ್ನುವ ಫೀಲ್ ಕೂಡ ಇರಲಿಲ್ಲ. ಆದರೆ, ಇಲ್ಲಿಗೆ ಬಂದ್ಮೇಲೆ ಎಲ್ಲವೂ ಸಾಧ್ಯವಾಗಿದೆ. ಮೊನ್ನೆ ಮೌನಿ ಅಮವಾಸ್ಯೆ ದಿನವೇ ಪ್ರಯಾಗ್ ರಾಜ್‌ಗೆ ಹೋಗಿದ್ದೆ. ನಿಜಕ್ಕೂ ಇದೊಂದು ಒಳ್ಳೆ ಅನುಭವವೇ ಆಗಿದೆ. ಹಾಗೆ ಇಲ್ಲಿಗೆ ಬಂದ ಮೇಲೆ ವಿಶೇಷ ಅನುಭವ ಆಗಿದೆ. ಪವಿತ್ರ ದೈವಿ ಶಕ್ತಿಗಳ ಆಶೀರ್ವಾದಗಳು ಸದಾ ನನ್ನ ಮೇಲೆ ಇದ್ದೇ ಇರುತ್ತದೆ ಅನ್ನುವ ಭಾವನೆ ಕೂಡ ಇದೆ ಎಂದು ಬರೆದುಕೊಂಡಿದ್ದಾರೆ.
ಮೊನ್ನೆಯಷ್ಟೇ ನಿರೂಪಕಿ ಅನುಶ್ರೀ, ಚಾರ್ಲಿ ನಿರ್ದೇಶಕ ಕಿರಣ್ ರಾಜ್, ನಿರ್ದೇಶಕ ರಾಜ್ ಬಿ. ಶೆಟ್ಟಿ ಗೆಳೆಯರ ಜೊತೆ ಪುಣ್ಯಸ್ನಾನ ಮಾಡಿದ್ದರು. ಇದಾದ ಬೆನ್ನಲ್ಲೇ ಕೆಜಿಎಫ್ ಸಿನಿಮಾದ ನಟಿ ಶ್ರೀನಿಧಿ ಶೆಟ್ಟಿ ಕೂಡ ಕುಂಭಮೇಳಕ್ಕೆ ಹೋಗಿದ್ದಾರೆ.
PublicNext
02/02/2025 05:20 pm