ಮುಂಬೈ: ಖ್ಯಾತ ಹಿರಿಯ ಗಾಯಕ ಉದಿತ್ ನಾರಾಯಣ್ ಲೈವ್ ಕಾರ್ಯಕ್ರಮವೊಂದರಲ್ಲಿ ಮಹಿಳಾ ಅಭಿಮಾನಿಯ ಲಿಪ್‌ಲಾಕ್ ಮಾಡಿ ಭಾರೀ ಟೀಕೆಗೆ ಗುರಿಯಾಗಿದ್ದಾರೆ.
69 ವರ್ಷದ ಉದಿತ್ ನಾರಾಯಣ್ ಅವರು ಹಿಂದಿ ಮಾತ್ರವಲ್ಲದೆ ಕನ್ನಡ, ಮಲಯಾಳಂ, ತೆಲುಗು, ತಮಿಳು ಸೇರಿದಂತೆ ಬಹುಭಾಷೆಗಳಲ್ಲಿ ಹಾಡಿ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಸೆಲ್ಫಿ ತೆಗೆದುಕೊಳ್ಳಲು ಬಂದ ಯುವತಿಯೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಓರ್ವ ಯುವತಿಗೆ ಕೆನ್ನೆಗೆ ಮುತ್ತು ಕೊಟ್ಟ ಉದಿತ್ ಮತ್ತೊಬ್ಬಾಕೆಗೆ ತುಟಿಗೇ ಮುತ್ತು ಕೊಟ್ಟಿದ್ದಾರೆ. ಲಿಪ್ ಲಾಕ್‌ಗೆ ಒಳಗಾದ ಯುವತಿಯು ಹೆಚ್ಚು ಕಡಿಮೆ ಅವರೆಲ್ಲರೂ ಉದಿತ್ ಮಗಳ ವಯಸ್ಸಿನವರು. ಈ ವಿಡಿಯೋ ನೋಡಿ ನೆಟ್ಟಿಗರು ಶಾಕ್ ಗೊಳಗಾಗಿದ್ದಾರೆ. ಹಿರಿಯ ಗಾಯಕ, ಇಷ್ಟೊಂದು ಗೌರವ ಸಂಪಾದಿಸಿರುವ ವ್ಯಕ್ತಿ ವೇದಿಕೆಯಲ್ಲಿ ಹೀಗೆ ಮಾಡಿದ್ದು ನಾಚಿಕೆಗೇಡು ಎಂದಿದ್ದಾರೆ.
PublicNext
02/02/2025 03:21 pm