ನಟಿ, ಖ್ಯಾತ ನಿರೂಪಕಿ, ಮಾಜಿ ಬಿಗ್ ಬಾಸ್ ಸ್ಪರ್ಧಿ ಚೈತ್ರಾ ವಾಸುದೇವನ್ 2ನೇ ಮದುವೆಗೆ ಸಜ್ಜಾಗಿದ್ದಾರೆ. ಕೊನೆಗೂ ಚೈತ್ರಾ ವಾಸುದೇವನ್ ಅವರು ತಾವು ಮದುವೆಯಾಗುತ್ತಿರೋ ಹುಡುಗ ಯಾರು ಎಂಬುದನ್ನು ಫೋಟೋ ಮೂಲಕ ರಿವೀಲ್ ಮಾಡಿದ್ದಾರೆ.
2017ರಲ್ಲಿ ಚೈತ್ರಾ ವಾಸುದೇವನ್ ಅವರು ಸತ್ಯ ನಾಯ್ಡು ಎಂಬುವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದ್ರೆ 2023ರಲ್ಲಿ ಚೈತ್ರಾ ತಮ್ಮ ವಿಚ್ಛೇದನದ ಬಗ್ಗೆ ಹೇಳಿದ್ದರು. ಇತ್ತೀಚೆಗೆ ತಾವು 2ನೇ ಮದುವೆ ಆಗುತ್ತಿರೋದಾಗಿ ಹೇಳಿಕೊಂಡಿದ್ದರು. ಅಷ್ಟೇ ಅಲ್ಲದೆ ಪ್ಯಾರೀಸ್‌ನಲ್ಲಿ ಭಾವಿ ಪತಿ ಜೊತೆ ಫೋಟೋಶೂಟ್ ಮಾಡಿಸಿದ್ದರು. ಆದರೆ ಹುಡುಗ ಯಾರು ಎಂಬ ಸುಳಿವನ್ನು ಮಾತ್ರ ಬಿಟ್ಟುಕೊಟ್ಟಿರಲಿಲ್ಲ. ಇದೀಗ ಭಾವಿ ಪತಿ ಜೊತೆಗಿನ ಫೋಟೋವನ್ನು ನಟಿ ಹಂಚಿಕೊಂಡಿದ್ದಾರೆ.
ಜಗದೀಪ್ ಎಲ್ ಎಂಬ ಉದ್ಯಮಿಯನ್ನು ಚೈತ್ರಾ ಮದುವೆ ಆಗುತ್ತಿದ್ದಾರೆ. ಇಬ್ಬರೂ ಪಿಂಕ್ ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ. ದೇವಸ್ಥಾನವೊಂದರಲ್ಲಿ ತೆಗೆದ ಫೋಟೋವನ್ನು ನಟಿ ಹಂಚಿಕೊಂಡಿದ್ದಾರೆ. ನವ ಜೋಡಿಗೆ ಹಲವರು ಶುಭ ಹಾರೈಸಿದ್ದಾರೆ.
PublicNext
02/02/2025 12:52 pm