", "articleSection": "Politics,Viral", "image": { "@type": "ImageObject", "url": "https://prod.cdn.publicnext.com/s3fs-public/235762-1738495203-WhatsApp-Image-2025-02-02-at-4.16.14-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಲಖನೌ: ಮೂರು ದಿನಗಳಿಂದ ನಾಪತ್ತೆಯಾದ ದಲಿತ ಯುವತಿ ಅಯೋಧ್ಯೆಯ ಹೊಲವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಈ ಕುರಿತು ಪತ್ರಿಕಾಗೋಷ್ಟಿಯಲ್ಲಿ ಮಾ...Read more" } ", "keywords": ",Politics,Viral", "url": "https://publicnext.com/node" }
ಲಖನೌ: ಮೂರು ದಿನಗಳಿಂದ ನಾಪತ್ತೆಯಾದ ದಲಿತ ಯುವತಿ ಅಯೋಧ್ಯೆಯ ಹೊಲವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಈ ಕುರಿತು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ತೀವ್ರ ಗದ್ಗದಿತರಾಗಿ ಕಣ್ಣೀರಿಟ್ಟಿದ್ದಾರೆ.
ದೇಶದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ಆ ಯುವತಿಯ ಜೀವ ಉಳಿಸಲು ನಮ್ಮಿಂದ ಸಾಧ್ಯವಾಗಲಿಲ್ಲ. ನಾನ ಪ್ರಧಾನ ಮಂತ್ರಿಗಳನ್ನು ಭೇಟಿಯಾಗಲಿದ್ದೇನೆ. ಸಂಸತ್ತಿನಲ್ಲಿ ಈ ವಿಚಾರ ಪ್ರಸ್ತಾಪಿಸಲಿದ್ದೇನೆ. ಸಂಸತ್ತಿನಲ್ಲಿ ಇ ಅನ್ಯಾಯದ ಸಾವಿಗೆ ನ್ಯಾಯ ಕೇಳುತ್ತೇನೆ. ಯುವತಿಯ ಸಾವಿಗೆ ನ್ಯಾಯ ಸಿಗದಿದ್ದಲ್ಲಿ ನಾನು ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ಅವಧೇಶ್ ಹೇಳಿದ್ದಾರೆ.
ಅಯೋಧ್ಯೆಯ ಫೈಜಾಬಾದ್ ಗ್ರಾಮದಿಂದ ಯುವತಿಯೋರ್ವಳು ನಾಮತ್ತೆಯಾಗಿದ್ದಳು. ನಂತರ ಆ ಯುವತಿಯ ಶವ ಫೈಜಾಬಾದ್ ಹೊರವಲಯದ ಹೊಲವೊಂದರಲ್ಲಿ ಪತ್ತೆಯಾಗಿತ್ತು. ಈಕೆಯನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ. ಬೆತ್ತಲೆಯಾದ ಸ್ಥಿತಿಯಲ್ಲಿ ಶವ ಸಿಕ್ಕಿದೆ. ಆಕೆಯ ಕಣ್ಣುಗಳನ್ನು ಕಿತ್ತುಹಾಕಲಾಗಿದೆ. ದೇಹದ ಮೇಲೆ ಗಾಯಗಳಾಗಿವೆ ಎಂದು ಮೃತ ಯುವತಿಯ ಕುಟುಂಬಸ್ಥರು ಆರೋಪಿಸಿದ್ದಾರೆ.
PublicNext
02/02/2025 04:50 pm