", "articleSection": "Law and Order,Agriculture", "image": { "@type": "ImageObject", "url": "https://prod.cdn.publicnext.com/s3fs-public/405356-1738754567-sssstst.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "MahanteshMolakalmuru" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮೊಳಕಾಲ್ಮೂರು: ತಾಲೂಕಿನ ನಾನಾ ಗ್ರಾಮಗಳಲ್ಲಿ ರಸ್ತೆ ಒಕ್ಕಲುತನ ಮಾಡುವ ಪ್ರಕ್ರಿಯೆ ಹೆಚ್ಚಾಗಿ ವಾಹನ ಸವಾರರ ಸುಗಮ ಸಂಚಾರಕ್ಕೆ ಅಡ್ಡಿಯಾಗಿರುವುದನ್...Read more" } ", "keywords": "Molakalmuru, Road Encroachment, Farmers Awareness, PSI Pandurangappa, Karnataka News, Road Safety, Encroachment Issues, Farmer Education, Indian Agriculture, Rural Development.,Chitradurga,Law-and-Order,Agriculture", "url": "https://publicnext.com/node" }
ಮೊಳಕಾಲ್ಮೂರು: ತಾಲೂಕಿನ ನಾನಾ ಗ್ರಾಮಗಳಲ್ಲಿ ರಸ್ತೆ ಒಕ್ಕಲುತನ ಮಾಡುವ ಪ್ರಕ್ರಿಯೆ ಹೆಚ್ಚಾಗಿ ವಾಹನ ಸವಾರರ ಸುಗಮ ಸಂಚಾರಕ್ಕೆ ಅಡ್ಡಿಯಾಗಿರುವುದನ್ನು ಮನಗಂಡ ಪಿಎಸ್ ಐ ಪಾಂಡುರಂಗಪ್ಪ ರಸ್ತೆಯಲ್ಲಿ ಒಕ್ಕಲುತನ ಮಾಡದಂತೆ ರೈತರಿಗೆ ಜಾಗೃತಿ ಮೂಡಿಸಿ ರೈತರ ಮನವೊಲಿಕೆ ಮಾಡಲು ಮುಂದಾಗಿದ್ದಾರೆ.
ತಾಲೂಕಿನ ಕೋನಸಾಗರ, ಕೊಂಡ್ಲಹಳ್ಳಿ, ಮೊಗಲಹಳ್ಳಿ, ಸುಲೇನಹಳ್ಳಿ, ಬಾಂಡ್ರಾವಿ, ತಮ್ಮೇನಹಳ್ಳಿ, ಆಮಕುಂದಿ, ರಾಯಾಪುರ, ತುಮೂಕೂರ್ಲಹಳ್ಳಿ ಭಾಗಗಳ ಮುಖ್ಯ ರಸ್ತೆಗಳಲ್ಲಿ ಹೆಚ್ಚಾಗಿ ರಸ್ತೆ ಒಕ್ಕಲುತನ ನಡೆಯುತ್ತಿದೆ. ಈ ಸ್ಥಳಗಳಿಗೆ ಭೇಟಿ ನೀಡಿದ ಪಿಎಸ್ ಐ ಪಾಂಡುರಂಗಪ್ಪ, ರಸ್ತೆ ಒಕ್ಕಲುತನದಿಂದ ವಾಹನ ಸವಾರರಿಗೆ ಅಡಚಣೆ ಉಂಟಾಗಿದೆ. ಅಪಘಾತಗಳು ಸಂಭವಿಸುತ್ತವೆ, ಹುರುಳಿ ಬಳ್ಳಿಯು ವಾಹನಗಳಿಗೆ ಸಿಲುಕಿ ಅಗ್ನಿ ಅವಘಡ ಸಂಭವಿಸಿ ವಾಹನಗಳು ಸುಟ್ಟು ಹೋಗುತ್ತಿವೆ. ಹಾಗಾಗಿ ಯಾವುದೇ ಕಾರಣಕ್ಕೂ ರಸ್ತೆಯಲ್ಲಿ ಒಕ್ಕಲುತನ ಮಾಡಬಾರದು ಎಂದು ರೈತರಿಗೆ ತಿಳಿ ಹೇಳಿದರು.
PublicNext
05/02/2025 04:52 pm