ಚಿತ್ರದುರ್ಗ: ಚಿತ್ರದುರ್ಗ ತಾಲ್ಲೂಕಿನ ಹುಣಸೆಕಟ್ಟೆ ಗ್ರಾಮದ ರೈತ ಕಾಂತರಾಜ್ ಹೂವು ಬೆಳೆದಿದ್ದಾರೆ. ಸಂಪೂರ್ಣವಾಗಿ ಬೆಳೆಯು ಕೈ ಕೊಟ್ಟು ಸಂಕಷ್ಟಕ್ಕೀಡಾಗಿದ್ದು ಸಾಲದ ಬಾಧೆ ಬೆನ್ನೇರಿದೆ.
ಹುಣ್ಸೆಕಟ್ಟೆ ಗ್ರಾಮದ ರೈತ ಕಾಂತರಾಜ್ ಅವರು ಒಂದು ಎಕರೆ ಜಾಗದಲ್ಲಿ ಸೇವಂತಿ ಹೂವು ಬೆಳೆದಿದ್ದರು. ಆದರೆ ಗಿಡಗಳು ಇದ್ದಕ್ಕಿದ್ದಂತೆ ಒಣಗಿ ಹೋಗಿರುವುದರಿಂದ ರೈತ ಸಂಕಷ್ಟದ ಮೇಲೆ ಸಂಕಷ್ಟ ಎದುರಿಸುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಈಗಾಗಲೇ ಸುಮಾರು 80,000ಕ್ಕೂ ಅಧಿಕ ಖರ್ಚು ಮಾಡಿರುವ ರೈತನಿಗೆ ಸಾಲದ ಬಾಧೆ ಬೆನ್ನೇರಿದೆ. ಔಷಧಿಗಳನ್ನು ಸಿಂಪಡಣೆ ಮಾಡಿದರೂ ಸಹ ರೋಗ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ರೈತರಿಗೆ ಸರಿಯಾದ ಮಾರ್ಗದರ್ಶನ ನೀಡುತ್ತಿಲ್ಲ ಎನ್ನುವುದು ರೈತರ ಆಗ್ರಹವಾಗಿದೆ.
ರೈತನ ಬೆಳೆಯುವ ಸಂಪೂರ್ಣವಾಗಿ ಕೈಕೊಟ್ಟಿದ್ದು ಹೊಲದಲ್ಲೇ ಸೇವಂತಿ ಹೂವಿನ ಗಿಡವನ್ನು ಟ್ರ್ಯಾಕ್ಟರ್ ಸಹಾಯದಿಂದ ಅಳಿಸಿ ಹಾಕುತಿದ್ದಾರೆ. ಒಟ್ಟಿನಲ್ಲಿ ರೈತ ಆದಾಯವಿಲ್ಲದೇ ಒಂದಲ್ಲ ಒಂದು ರೀತಿಯ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.
PublicNext
04/02/2025 05:45 pm