", "articleSection": "Human Stories", "image": { "@type": "ImageObject", "url": "https://prod.cdn.publicnext.com/s3fs-public/418299-1737818407-prerane.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SureshChallakere" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಳ್ಳಕೆರೆ: ನಗರದಲ್ಲಿ ಶೈಕ್ಷಣಿಕವಾಗಿ ಬಡ ಮಕ್ಕಳ ಅನುಕೂಲಕ್ಕಾಗಿ ಸುಮಾರು 53 ಎಕರೆ ಭೂಮಿಯನ್ನು ದಾನವಾಗಿ ಕೊಟ್ಟಿರುವ ದಿವಂಗತ ಎಚ್.ಪಿ. ಪಂಚಾಕ್ಷ...Read more" } ", "keywords": "Challakere News, Land Donation, Philanthropic Couple, Memorial Construction, Karnataka Donation, Charity News, Social Service, Challakere Development, Indian Philanthropy, Generous Donors.,Chitradurga,Human-Stories", "url": "https://publicnext.com/node" }
ಚಳ್ಳಕೆರೆ: ನಗರದಲ್ಲಿ ಶೈಕ್ಷಣಿಕವಾಗಿ ಬಡ ಮಕ್ಕಳ ಅನುಕೂಲಕ್ಕಾಗಿ ಸುಮಾರು 53 ಎಕರೆ ಭೂಮಿಯನ್ನು ದಾನವಾಗಿ ಕೊಟ್ಟಿರುವ ದಿವಂಗತ ಎಚ್.ಪಿ. ಪಂಚಾಕ್ಷರಪ್ಪ- ಚನ್ನಬಸಮ್ಮ ದಂಪತಿಯ ಸಮಾಧಿಗೆ ಕಾಯಕಲ್ಪ ರೂಪಿಸಿ, ಸ್ಮಾರಕವಾಗಿ ನಿರ್ಮಾಣ ಮಾಡಿರುವುದು ಸಾರ್ವಜನಿಕವಾಗಿ ಮೆಚ್ಚುಗೆ ವ್ಯಕ್ತವಾಗಿದೆ.
ಪ್ರಸ್ತುತ ಎಚ್‌ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಇದ್ದ ಸಮಾಧಿಗಳು ಮೂಲ ಅಸ್ತಿತ್ವ ಕಳೆದುಕೊಳ್ಳುವ ರೀತಿ ಶಿಥಿಲಾವಸ್ಥೆಯಲ್ಲಿದ್ದವು. 1987ರಿಂದ ಈ ತನಕ 40 ಮಂದಿ ಪ್ರಾಚಾರ್ಯರು ಕರ್ತವ್ಯ ನಿರ್ವಹಿಸಿರುವ ಕಾಲೇಜಿನಲ್ಲಿ ಈ ಸಮಾಧಿಗಳ ದುರಸ್ತಿಗೆ ಕ್ರಮ ವಹಿಸಿರಲಿಲ್ಲ. ಕಾರಣ, ಸಮಾಧಿಗಳ ಮೂಲರೂಪ ವಿರೂಪ ಮಾಡುವುದು, ಸ್ಥಿತಿ ಬದಲಾಯಿಸುವ ಕೆಲಸಗಳಿಂದ ಸಂಕಷ್ಟಗಳು ಎದುರಾಗುತ್ತವೆ ಎನ್ನುವ ಮೂಢನಂಬಿಕೆ ಭಯದಲ್ಲಿ ಯಾರೂ ಮುಂದಾಗಿರಲಿಲ್ಲ.
ಪ್ರಸ್ತುತ ಪ್ರಾಚಾರ್ಯರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರೊ.ಬಿ.ಎಸ್. ಮಂಜುನಾಥ್, ಸ್ವಾಭಾವಿಕವಾಗಿ ಎದುರಾಗುವ ಸಂಕಷ್ಟಗಳು ಯಾರಿಂದಲೂ ತಪ್ಪಿಸಲಾಗದು ಎನ್ನುವ ದೃಢ ನಿರ್ಧಾರದಲ್ಲಿ ಸಾವಿರಾರು ಕೋಟಿ ಬೆಲೆ ಬಾಳುವ ಭೂಮಿಯನ್ನು ಶಿಕ್ಷಣ ವ್ಯವಸ್ಥೆಗೆ ದಾನ ಮಾಡಿರುವ ಭೂದಾನಿಗಳ ಸಮಾಧಿ ಸಮಾಜಕ್ಕೆ ಮಾದರಿಯಾಗಿ ಉಳಿಯಬೇಕು ಎನ್ನುವ ಚಿಂತನೆಯಲ್ಲಿ ಕಾಲೇಜು ಅಭಿವೃದ್ಧಿ ಅನುದಾನದಲ್ಲಿ 2 ಲಕ್ಷ ಮತ್ತು ಕೆಲ ದಾನಿಗಳ ನೆರವಿನಿಂದಲೂ ಸುಮಾರು 3 ಲಕ್ಷ ರೂಪಾಯಿ ವೆಚ್ಚದಲ್ಲಿ ಸ್ಮಾರಕ ನಿರ್ಮಿಸಿ ಮಾದರಿ ಎನಿಸಿಕೊಂಡಿದ್ದಾರೆ.
ಬಿ.ಎಲ್. ಗೌಡ ಅಧ್ಯಕ್ಷರಾಗಿ, ರಾಜಶೇಖರ ಶೆಟ್ಟಿ ಕಾರ್ಯದರ್ಶಿಯಾಗಿ ಶ್ರೀ ವೀರಭದ್ರಸ್ವಾಮಿ ವಿದ್ಯಾಸಂಸ್ಥೆ ಸ್ಥಾಪನೆ ಮಾಡಲಾಗಿದೆ. ಈ ಅವಧಿಯಲ್ಲಿ ಚಳ್ಳಕೆರೆ ತಾಲೂಕಿನ ಹರವಿಗೊಂಡನಹಳ್ಳಿ ಮೂಲದ ಎಚ್.ಪಿ. ಪಂಚಾಕ್ಷರಪ್ಪ- ಚನ್ನಬಸಮ್ಮ ದಂಪತಿ 53 ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದಾರೆ. ಪ್ರಸ್ತುತ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 3 ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.
ಕ್ಷೇತ್ರದ ಶಾಸಕ ಟಿ. ರಘುಮೂರ್ತಿ ಅವರ ಶೈಕ್ಷಣಿಕ ಗುರಿ ಸಾಧನೆ ದೃಷ್ಟಿಯಿಂದ 8.80 ಲಕ್ಷ ವೆಚ್ಚದಲ್ಲಿ ವಿಶ್ವ ವಿದ್ಯಾನಿಲಯ ಮಾದರಿಯಲ್ಲಿ ನೂತನ ಕಾಲೇಜು ನಿರ್ಮಾಣ ಮಾಡಲಾಗಿದೆ. ಸುಸಜ್ಜಿತ ಪ್ರಾಚಾರ್ಯರ ಕೊಠಡಿ ಸೇರಿದಂತೆ 42 ಬೋಧನಾ ತರಗತಿಗಳು, ವಿಜ್ಞಾನ ವಿಭಾಗದ 8 ಕೊಠಡಿಗಳಲ್ಲಿ ವಿಜ್ಞಾನ ಪ್ರಯೋಗಾಲಯ, 70 ಸಾವಿರ ಪಠ್ಯ ಪುಸ್ತಕಗಳ ಸಂಗ್ರಹವಿರುವ ಗ್ರಂಥಾಲಯ, ಜನಪದ ವಸ್ತು ಸಂಗ್ರಹಾಲಯ, ಸಭಾ ಮಂಟಪ, ಕ್ಯಾಂಟೀನ್ ಅನುಕೂಲವಿದೆ. ಈಗ ಪ್ರಥಮ ದರ್ಜೆ ಕಾಲೇಜು ವಿದ್ಯಾಗಿರಿಯಾಗಿ ಮಾರ್ಪಟ್ಟಿದೆ.
PublicNext
25/01/2025 08:50 pm