ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಹೂವು ಬೆಳೆ ಕೈಕೊಟ್ಟು ರೈತ ಕಂಗಾಲು

ಚಿತ್ರದುರ್ಗ: ಚಿತ್ರದುರ್ಗ ತಾಲ್ಲೂಕಿನ ತುರುವನೂರು ಹೋಬಳಿ ವ್ಯಾಪ್ತಿಯ ಹುಣಸೆಕಟ್ಟೆ ಗ್ರಾಮದಲ್ಲಿ ರೈತ ಕಾಂತರಾಜ್ ಹಾಗೂ ಅವರ ಸಹೋದರ ಇಬ್ಬರು ತಲಾ ಒಂದು ಎಕರೆ ಜಾಗದಲ್ಲಿ ಸೆಂಟ್ ಯೆಲ್ಲೋ ಎಂಬ ಹೂವು ಬೆಳೆ ಕೈಕೊಟ್ಟು ರೈತ ಕಂಗಾಲಾಗಿದ್ದಾರೆ.

ಹುಣಸೇಕಟ್ಟೆ ಗ್ರಾಮದ ರೈತರು ಕಲ್ಕತ್ತಾದಿಂದ 3 ರೂಪಾಯಿತಂತೆ 30 ಸಾವಿರ ಸೆಂಟ್ ಎಲ್ಲೋ ಹೂವಿನ ಸಸಿಗಳನ್ನ ತಂದು ಬಿತ್ತನೆ ಮಾಡಿದ್ದು ಔಷಧಿಗೆ ಸುಮಾರು 70 ಸಾವಿರ ಖರ್ಚು ಅಷ್ಟೇ ಅಲ್ಲದೇ.. ವಿಶೇಷವಾಗಿ 50 ಸಾವಿರ ಖರ್ಚು ಮಾಡಿ ವಿನೂತನವಾಗಿ ರಾತ್ರಿಯಿಡಿ ಬಲ್ಪ್ ಗಳ ಸಹಾಯದಿಂದ ಬೆಳಕಿನ ಸಹಾಯದಿಂದ ಹೂ ಬೆಳೆಯನ್ನ ಬೆಳೆಯಲ್ಲೂ ಮುಂದಾಗಿದರು,

ಈಗಾಗಲೇ ಸುಮಾರು 10 ಸಾವಿರದಷ್ಟು ಹೂವಿನ ಸಸಿಗಳು ಒಣಗಿ ಹೋಗಿದ್ದು ರೈತ ಕಾಂತರಾಜ್ ಕಂಗಾಲಾಗಿದ್ದಾನೆ.

ಸಸಿಗಳು ಒಣಗಿ ಹೋಗಿ ಲಕ್ಷಾಂತರ ರೂಪಾಯಿ ರೈತನಿಗೆ ನಷ್ಟ ಉಂಟಾಗಿದ್ದು ಈ ಬಗ್ಗೆ ಇಲಾಖೆ ಗಮನಕ್ಕೂ ಕೂಡ ತಂದಿದ್ದು ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸದೆ ಇರುವುದಾಗಿ ಬೇಸರ ವ್ಯಕ್ತಪಡಿಸಿದ್ದಾರೆ.

ಹತ್ತಾರು ಬಗೆಯ ಔಷಧಿಯನ್ನು ಹೂ ಬೆಳೆಗೆ ಸಿಂಪಡನೆ ಮಾಡಿದ್ದರು ಸಹ ಹೂವಿನ ಸಸಿಗಳು ಒಣಗಿ ಹೋಗುತ್ತಿದ್ದು ಇಲಾಖೆ ಈ ಬಗ್ಗೆ ಗಮನ ಹರಿಸಿ ರೈತರಿಗೆ ಸರಿಯಾದ ಮಾರ್ಗದರ್ಶನ ನೀಡುತ್ತಿಲ್ಲ, ಇದರಿಂದ ರೈತ ನಷ್ಟ ಅನುಭವಿಸುವಂತ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ರೈತ ಕಾಂತರಾಜ್ ಅವರು ಆಗ್ರಹ ಮಾಡಿದ್ದಾರೆ.

Edited By : Shivu K
PublicNext

PublicNext

02/02/2025 10:32 pm

Cinque Terre

39.05 K

Cinque Terre

0

ಸಂಬಂಧಿತ ಸುದ್ದಿ